ಬೆಂಗಳೂರು: ಧರ್ಮಸ್ಥಳ ಹತ್ಯೆಗಳನ್ನು ಕುರಿತು ಸಾಕ್ಷಿ ದೂರುದಾರನಾಗಿರುವ ಚಿನ್ನಯ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪಿಐಎಲ್ ಸುಪ್ರೀಂಕೋರ್ಟ್ ವಜಾಗೊಳಿಸಿರುವ ಬಗ್ಗೆ ಹಿರಿಯ ವಕೀಲ ಕೆ.ವಿ.ಧನಂಜಯ ಸ್ಪಷ್ಟನೆ ನೀಡಿದ್ದಾರೆ. ಚಿನ್ನಯ್ಯ ಪರ ವಾದಿಸಿದ್ದ ಅವರು ಪ್ರಕಟಣೆ ನೀಡಿದ್ದು, ದೂರುದಾರರು ತಡವಾಗಿ ಅರ್ಜಿ ಸಲ್ಲಿಸಿದ್ದಕ್ಕೆ ಮತ್ತು ಆರೋಪಗಳ ಅರ್ಹತೆಯನ್ನು ಪರಿಶೀಲಿಸದೆ ವಜಾಗೊಳಿಸಿರುತ್ತಿರುವಾಗಿ ಸುಪ್ರೀಂಕೋರ್ಟ್ ಹೇಳಿದೆ ಎಂದಿದ್ದಾರೆ.
ಇದೇ ಕಾರಣಕ್ಕೆ ಯಾವುದೇ ಪ್ರತಿವಾದಿಗಳಿಗೆ ಅಥವಾ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿಲ್ಲ. ಸದ್ಯ ನಡೆಯುತ್ತಿರುವ ಎಸ್ ಐಟಿ ತನಿಖೆ ಮೇಲೆ ಸುಪ್ರೀಂಕೋರ್ಟ್ ಹೇಳಿಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಸಾಂವಿಧಾನಿಕ ಕಾನೂನಿನ ಅಡಿಯಲ್ಲಿ ರಾಜ್ಯಕ್ಕೆ ಎಸ್ ಐಟಿ ರಚನೆ ಅಧಿಕಾರ ಇದೆ. ಅಪರಾಧದ ತನಿಖೆಗೆ ಪೊಲೀಸರು ಅಧಿಕಾರ ಹೊಂದಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಗೊತ್ತಿದ್ದರೆ ಸರ್ಕಾರಕ್ಕೆ ಎಸ್ ಐಟಿ ರಚಿಸುತ್ತಿರಲಿಲ್ಲ ಎಂದು ಹೇಳಲಾಗುವುದಿಲ್ಲ. ಸುಪ್ರೀಂಕೋರ್ಟ್ ಆದೇಶದಲ್ಲಿ ಎಫ್ ಐಆರ್ ಹಾಗೂ ಎಸ್ ಐಟಿ ರಚಿಸಬಾರದು ಎಂದು ಎಲ್ಲಯೂ ಉಲ್ಲೇಖಿಸಿಲ್ಲ ಎಂದು ತಿಳಿಸಿದ್ದಾರೆ.
ಆರೋಪಗಳು ಮೇಲ್ನೋಟಕ್ಕೆ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಎಸ್ ಐಟಿ ಆಗಿದೆ. ಒಂದು ವೇಳೆ ದೂರುದಾರನ ಹೇಳಿಕೆ ಸುಳ್ಳು ಎಂದಾದರೆ ಆತನ ವಿರುದ್ಧವೇ ಪ್ರಕರಣ ದಾಖಲಾಗುತ್ತದೆ ಎಂದು ನಾನೇ ಹೇಳಿದ್ದೇನೆ ಎಂದು ಧನಂಜಯ ತಿಳಿಸಿದ್ದಾರೆ.