ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಅತಿವೃಷ್ಠಿ ಪರಿಹಾರಕ್ಕೆ ಕೇಂದ್ರದಿಂದ ನೆರವು ತನ್ನಿ: ಬಿಜೆಪಿಗೆ ಪ್ರಿಯಾಂಕ್‌ ಖರ್ಗೆ ಸವಾಲು

Most read

ಬೆಂಗಳೂರು: @BJP4Karnataka ಪಕ್ಷದಲ್ಲಿ ಯಾರಿಗಾದರೂ ಬಡ್ತಿ ಬೇಕಾದಾಗಲೆಲ್ಲ ಅವರು ನನ್ನ ಹೆಸರನ್ನು ಜಪಿಸುತ್ತಾ, RSS ಪಾಠಶಾಖೆಯಲ್ಲಿ ಕಲಿತ ಸುಳ್ಳು ಹಬ್ಬಿಸುವ ವಿದ್ಯೆಯ ಮೊರೆ ಹೋಗುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಲೇವಡಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ತಮ್ಮನ್ನು ಟ್ವೀಟಾಸುರ ಎಂದು ಟೀಕಿಸಿದ್ದ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.

ಕರ್ನಾಟಕವು ಪ್ರವಾಹ ಎದುರಿಸುವಾಗಲೆಲ್ಲಾ ಕಾಣೆಯಾಗುವುದು ಮೋದಿ ಸರ್ಕಾರದ ನೆರವು ಹೊರತು ಬೇರೇನೂ ಅಲ್ಲ. ಮೋದಿ ಸರ್ಕಾರದ ನಿರ್ದಯ ನೀತಿಗೆ ರಾಜ್ಯದಲ್ಲಿ ಯಾವ ಸರ್ಕಾರವಿದ್ದರೂ ಬೇಧವಿಲ್ಲ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿವೃಷ್ಟಿಯಾದಾಗಲೂ ಮೋದಿಯವರಿಗೆ ಕರ್ನಾಟಕ ಕಾಣಿಸಿರಲಿಲ್ಲ, ಈಗಲೂ ಕಾಣಿಸುತ್ತಿಲ್ಲ ಎಂದಿದ್ದಾರೆ.

ರಾಜ್ಯ ಬಿಜೆಪಿಯವರಿಗೆ ಜನರ ಬಗ್ಗೆ ನೈಜ ಕಾಳಜಿ ಇದ್ದರೆ ಕಾಣೆಯಾಗಿರುವ ಕೇಂದ್ರ ಸರ್ಕಾರದ ನೆರವನ್ನು, ಕಾಣೆಯಾಗಿರುವ ಕೇಂದ್ರ ಸರ್ಕಾರದ ಮಾನವೀಯತೆಯನ್ನು ಹುಡುಕಿ ತರಲಿ ಎಂದು ಸವಾಲು ಹಾಕಿದ್ದಾರೆ.

ಹೆಚ್ಚುವರಿ ಮಾಹಿತಿ:

ನಿಮ್ಮ ಕಾರ್ಯಕರ್ತರು ಮತ್ತು ನಿಮ್ಮ ಪಕ್ಷದ ಬ್ಲಾಕ್ ಅಧ್ಯಕ್ಷರು ಸೆಪ್ಟೆಂಬರ್ 17 ರಂದು ಕಲಬುರ್ಗಿಯಲ್ಲಿ ಮುಖ್ಯಮಂತ್ರಿ ಮತ್ತು ನನ್ನನ್ನು ಭೇಟಿ ಮಾಡಿ, ಬೆಳೆ ವಿಮೆಯಲ್ಲಿ ರೈತರಿಗೆ 650 ಕೋಟಿಗೂ ಹೆಚ್ಚು ಪರಿಹಾವನ್ನು ನೀಡಿದಕ್ಕೆ, ನಮಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಂದಹಾಗೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲಬುರ್ಗಿಯ ಉಸ್ತುವಾರಿ ಸಚಿವರು ಯಾರಿದ್ದರು? ಎಂದೂ ಲೇವಡಿ ಮಾಡಿದ್ದಾರೆ.

More articles

Latest article