ಏಕರೂಪದ ಸಿನಿಮಾ ಟಿಕೆಟ್‌ ದರ: ಸರ್ಕಾರದ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್

Most read

ಬೆಂಗಳೂರು: ಇತ್ತೀಚೆಗೆ ಸರ್ಕಾರ ಏಕರೂಪದ ಸಿನಿಮಾ ಟಿಕೆಟ್ ದರವನ್ನು ರೂ. 200ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಿತ್ತು.  ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಹೈಕೋರ್ಟ್ ಮೊರೆ ಹೋಗಿದ್ದವು. ಇದೀಗ ಸರ್ಕಾರದ ಈ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಕೊಟ್ಟಿದೆ. ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಪೀಠ ತಡೆ ನೀಡಿ ವಿಚಾರಣೆಯನ್ನು ಮುಂದೂಡಿದೆ.

ಮಲ್ಟಿಪ್ಲೆಕ್ಸ್​ ಗಳಲ್ಲಿ ಟಿಕೆಟ್ ದರಕ್ಕೆ ಕಡಿವಾಣವೇ ಇರಲಿಲ್ಲ. ಮನಸೋ ಇಚ್ಚೆ ಟಿಕೆಟ್‌ ದರವನ್ನು ನಿಗದಿ ಮಾಡಲಾಗುತ್ತಿತ್ತು. ಈ ಸಂಬಂಧ ಸಾಮಾನ್ಯ ಜನರಿಗೆ ಹೊರೆಯಾಗುತ್ತಿದೆ ಎಂದು ಸರ್ಕಾರಕ್ಕೆ ದೂರುಗಳನ್ನು ಸಲ್ಲಿಸಲಾಗಿತ್ತು.  ಏಕಪರದೆ ಮತ್ತು ಮಲ್ಟಿಪ್ಲೆಕ್ಸ್ ​ಗಳಲ್ಲಿ ಟಿಕೆಟ್​ನ ಮೂಲ ಬೆಲೆ 200 ರೂಪಾಯಿ ಜೊತೆಗೆ ಶೇ.18 ತೆರಿಗೆಯೂ ಸೇರಿ ಟಿಕೆಟ್ ದರವನ್ನು 236 ರೂ.ಗೆ ನಿಗದಿ ಮಾಡಲಾಗಿತ್ತು. ಈ ಆದೇಶ ಸೆ. 12ರಂದು ಜಾರಿಗೆ ಬಂದಿತ್ತು.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗುವ ಹೊತ್ತಿನಲ್ಲಿ ಈ ಆದೇಶ ಹೊರಬಿದ್ದಿದೆ.

ಬೃಹತ್‌ ಪ್ರಮಾಣದ ಬಂಡವಾಳ ಹೂಡಿ ಈ ಚಿತ್ರವನ್ನು ನಿರ್ಮಿಸಲಾಗಿತ್ತು. ಟಿಕೆಟ್‌ ದರ  200 ರೂ. ಆದರೆ ಕಲೆಕ್ಷನ್ ಗೆ ಹೊಡೆತ ಬೀಳುತ್ತದೆ ಎಂದು ಹೊಂಬಾಳೆ ಫಿಲ್ಮ್ಸ್‌ ಕೋರ್ಟ್‌ ಮೊರೆ ಹೋಗಿತ್ತು.

More articles

Latest article