ದ್ವೇಷ ಭಾಷಣ: ಬಿಜೆಪಿ ಮುಖಂಡ ಸಿ.ಟಿ.ರವಿ ವಿರುದ್ಧ ಎಫ್‌ ಐ ಆರ್‌

Most read

ಮದ್ದೂರು: ಮದ್ದೂರಿನಲ್ಲಿ ನಡೆದ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಸಮಾರಂಭದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಡಿಯಲ್ಲಿ ಬಿಜೆಪಿ ಮುಖಂಡ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ವಿರುದ್ಧ ಮದ್ದೂರು ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಉಂಟಾಗುವಂತೆ ಮಾತನಾಡಿದ್ದಾರೆ. ಶೇ. 5ರಷ್ಟು ಜನಸಂಖ್ಯೆ ಇದ್ದಾಗಲೇ ಈ ರೀತಿ ವರ್ತಿಸುತ್ತಿದ್ದಾರೆ. ಅಕಸ್ಮಾತ್‌ ಅವರ ಜನಸಂಖ್ಯೆ ಶೇ. 50ಕ್ಕೆ ಏರಿದರೆ ನಮ್ಮ ಮಕ್ಕಳು, ಮೊಮ್ಮಕ್ಕಳು ಬದುಕಲು ಸಾಧ್ಯವೇ? ಕೆಲವು ಕುತಂತ್ರಿಗಳು ಓಟಿನ ಅಸೆಗಾಗಿ ಹಿಂದೂ ಸಮಾಜವನ್ನು ಒಡೆಯುತ್ತಾರೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮುಸಲ್ಮಾನರು ಪಾಕಿಸ್ತಾನ್ ಜಿಂದಾಬಾದ್ ಹೇಳಿದರೂ, ಬಾಂಬ್ ಹಾಕಿದರೂ ಓಕೆ ಓಕೆ ಎಂದು ಹೇಳುತ್ತಾರೆ. ಬಹು ಹಿಂದೆಯೇ ಇವರಿಗೆ ಬುದ್ದಿ ಕಲಿಸಬೇಕಿತ್ತು,  ಅವರು ಹೊರಗಡೆಯಿಂದ ಬಂದವರು, ನಾವು ಸ್ಥಳೀಯರು. ಅವರ ತಲೆ ತೆಗೆಯಲೂ ಸಿದ್ಧ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ರಲಾಗಿದೆ.

ಕಲ್ಲು ಹೊಡೆದವರನ್ನು, ಕಲ್ಲಿನ ಒಳಗಡೆ ಸಮಾಧಿ ಮಾಡೋ ತಾಕತ್ತು ಹಿಂದೂ ಸಮಾಜಕ್ಕೆ ಇದೆಎಂದು ಅನ್ಯ ಸಮುದಾಯಗಳ ಮಧ್ಯೆ ದ್ವೇಷ ಉಂಟು ಮಾಡುವ ಮತ್ತು ಸೌಹಾರ್ದ ಭಾವನೆಗಳಿಗೆ ಭಾದಕವಾಗುವಂತೆ ವೈರತ್ವ, ದ್ವೇಷ ಉಂಟಾಗುವಂತೆ ಭಾಷಣ ಮಾಡಿದ್ದಾರೆಎಂದು ಸಬ್ ಇನ್‌ಸ್ಪೆಕ್ಟರ್ ಮಂಜುನಾಥ ಕೆ.  ದೂರಿನಲ್ಲಿ ವಿವರಿಸಿದ್ದಾರೆ.

More articles

Latest article