Saturday, September 6, 2025

ಎಸ್‌ ಪಿ.ಯನ್ನು ನಾಯಿಗೆ ಹೋಲಿಸಿದ್ದ ಬಿಜೆಪಿ ಶಾಸಕ ಹರೀಶ್;‌ ವರದಿ ಕೇಳಿದ ಮಹಿಳಾ ಆಯೋಗ

Most read

ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಅವರನ್ನು ಶ್ವಾನಕ್ಕೆ ಹೋಲಿಸಿ ಮಾತನಾಡಿ ಅವಮಾನಿಸಿದ್ದ ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಹೇಳಿಕೆ ಕುರಿತು ವರದಿ ನೀಡುವಂತೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿದೆ. ಪ್ರಕರಣವನ್ನು ಪರಿಶೀಲಸಿ ನಿಯಮಾನುಸಾರ ಕ್ರಮ ಕೈಗೊಂಡು ಶೀಘ್ರ ವರದಿ ನೀಡುವಂತೆ ಆಯೋಗ ಕೋರಿದೆ.

ಶಾಸಕರ ಈ ಹೇಳಿಕೆಯನ್ನು ಖಂಡಿಸಿರುವ ರಾಜ್ಯ ಮಹಿಳಾ ಆಯೋಗ, ಶಾಸಕರ ವಿರುದ್ಧ ಕೈಗೊಂಡಿರುವ ಕ್ರಮಗಳನ್ನು ಕುರಿತ ವರದಿ ಸಲ್ಲಿಸುವಂತೆ ಪೂರ್ವ ವಲಯದ ಐಜಿಪಿ ಬಿ.ಆರ್‌. ರವಿಕಾಂತೇಗೌಡ ಅವರಿಗೆ ಪತ್ರ ಬರೆದಿದೆ.

ಮಹಿಳಾ ಅಧಿಕಾರಿಯನ್ನು ಸಾರ್ವಜನಿಕವಾಗಿ ಅವಮಾನಿಸಿರುವುದನು ಗಂಭೀರವಾಗಿ ಪರಿಗಣಿಸಿರುವ ಆಯೋಗವು ಕ್ರಮಕ್ಕೆ ಮುಂದಾಗಿದೆ.

ಮೂರು ದಿನಗಳ ಹಿಂದೆ ಶಾಸಕ ಹರೀಶ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಅವರನ್ನು ನಾಯಿಗೆ ಹೋಲಿಸಿ ಮಾತನಾಡಿದ್ದರು. ನಂತರ ಉಮಾ ಪ್ರಶಾಂತ್‌ ದೂರು ದಾಖಲಿಸಿದ್ದರು.

More articles

Latest article