ಮತಕಳ್ಳತನದ  ‘ಹೈಡ್ರೋಜನ್ ಬಾಂಬ್’ ಸ್ಫೋಟಗೊಂಡರೆ ಪ್ರಧಾನಿ ಮೋದಿ ಮುಖ ತೋರಿಸಲಾರರು; ರಾಹುಲ್ ಗಾಂಧಿ ವಾಗ್ದಾಳಿ

Most read

ಪಟನಾ: ಬಿಹಾರ, ಬೆಂಗಳೂರು ಸೇರಿದಂತೆ ದೇಶಾದ್ಯಂತ ನಡೆದಿರುವ ಮತ ಕಳ್ಳತನ ಕುರಿತು ಈಗಾಗಲೇ ದಾಖಲೆ ಸಹಿತ ಬಹಿರಂಗೊಳಿಸಿರುವ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತೊಂದು ಸುತ್ತಿನ ಮತ ಕಳ್ಳತನ ಬಹಿರಂಗಪಡಿಸಲು ಮುಂದಾಗಿದ್ದಾರೆ. ಈ ಮತ ಕಳ್ಳತನದ ದಾಖಲೆಗಳನ್ನು ಅವರು ‘ಹೈಡ್ರೋಜನ್ ಬಾಂಬ್‘ಗೆ ಹೋಲಿಸಿದ್ದಾರೆ.

ಒಂದು ವೇಳೆ ಈ ಬಾಂಬ್‌ ಸಿಡಿದ ನಂತರ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ತಮ್ಮ ಮುಖವನ್ನು ತೋರಿಸಲು ಆಗದು ಎಂದೂ ಹೇಳಿದ್ದಾರೆ.

ಬಿಹಾರದಲ್ಲಿ 16 ದಿನಗಳ ಕಾಲ ನಡೆದ ʼಮತದಾರರ ಅಧಿಕಾರ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ರಾಹುಲ್‌ ಮಾತನಾಡಿದರು.  

ಪರಮಾಣು ಬಾಂಬ್‌ ಗಿಂತ ದೊಡ್ಡದಾದ ಬಾಂಬ್‌ ಯಾವುದು ಗೊತ್ತೇ? ಅದು ಹೈಡ್ರೋಜನ್ ಬಾಂಬ್. ಆ ಬಾಂಬ್‌ ಎದುರಿಸಲು ನೀವು ಸಿದ್ಧರಾಗಿರಬೇಕು.  ಬಾಂಬ್‌ ಸ್ಫೋಟದ ನಂತರ ಮತಕಳ್ಳತದ ವಾಸ್ತವತೆಯನ್ನು ಇಡೀ ದೇಶ ಅರಿತುಕೊಳ್ಳಲಿದೆ ಎಂದು ಎಂದು ರಾಹುಲ್‌ ವಾಗ್ದಾಳಿ ನಡೆಸಿದರು.

ಮತ ಕಳ್ಳತನ ಎಂದರೆ ಕೇವಲ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಮಾತ್ರ ಅಲ್ಲ. ಉದ್ಯೋಗ, ಪಡಿತರ ಚೀಟಿ ಮತ್ತಿತರ ಹಕ್ಕುಗಳನ್ನು ಕಸಿದುಕೊಳ್ಳಲು ಹುನ್ನಾರ ರೂಪಿಸಲಾಗಿದೆ. ಬಿಹಾರ ಒಂದು ಕ್ರಾಂತಿಕಾರಿ ರಾಜ್ಯವಾ. ಸಂವಿಧಾನದ ಹತ್ಯೆ ಮಾಡಲು ಕಾಂಗ್ರೆಸ್ ಅವಕಾಶ ಕಲ್ಪಿಸುವುದಿಲ್ಲ. ಈ ಕಾರಣಕ್ಕಾಗಿಯೇ ಯಾತ್ರೆಯನ್ನು ನಡೆಸಲಾಗಿದೆ. ಮತದಾರ ಅಧಿಕಾರ ಯಾತ್ರೆಗೆ ರಾಜ್ಯಾದ್ಯಂತ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ ಎಂದು ಹೇಳಿದರು.

ಮತದಾರರ ಅಧಿಕಾರ ಯಾತ್ರೆಯು ಬಿಹಾರದ ಒಟ್ಟು 25 ಜಿಲ್ಲೆಗಳ 110 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,300 ಕಿ.ಮೀಗಳಷ್ಟು ಸಾಗಿದೆ. ರಾಹುಲ್‌ ಗಾಂಧಿ ಅವರು ಈ ಯಾತ್ರೆಯ ನೇತೃತ್ವ ವಹಿಸಿದ್ದರು.

More articles

Latest article