ವಿಶಾಖಪಟ್ಟಣ: ದಕ್ಷಿಣ ಭಾರತದ ಹೈದರಾಬಾದ್, ಬೆಂಗಳೂರು ಅಮರಾವತಿ ಹಾಗೂ ಚೆನ್ನೈ ಹಾಗೂ ಬೆಂಗಳೂರು ನಡುವೆ ಬುಲೆಟ್ ರೈಲು ಸಂಪರ್ಕ ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಇಲ್ಲಿ ಜರುಗುತ್ತಿರುವ ಭಾರತ ಆಹಾರ ಉತ್ಪಾದನಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಕ್ಷಿಣದ ಭಾರತದ ಈ ನಾಲ್ಕು ಪ್ರಮುಖ ನಗರಗಳ ಐದು ಕೋಟಿ ನಿವಾಸಿಗಳಿಗೆ ಬುಲೆಟ್ ರೈಲು ಸಂಚಾರದಿಂದ ಅನುಕೂಲವಾಗಲಿದೆ. ಸಮೀಕ್ಷೆಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಒಂದು ಬಾರಿ ಬುಲೆಟ್ ರೈಲು ಸಂಚಾರ ಆರಂಬಗೊಂಡರೆ ಹೈದರಾಬಾದ್‌ನಿಂದ, ಚೆನ್ನೈ, ಅಮರಾವತಿ, ಬೆಂಗಳೂರು ಈ ನಾಲ್ಕೂ ನಗರಗಳು ಜಗತ್ತಿನ ಅತಿ ದೊಡ್ಡ ಮಾರುಕಟ್ಟೆಯಾಗಿ ಪರಿವರ್ತನೆಯಾಗಲಿವೆ ಎಂದು ಪ್ರತಿಪಾದಿಸಿದ್ದಾರೆ.
ಬುಲೆಟ್ ರೈಲು ಸಂಚಾರಕ್ಕೆ ಅನುಗುಣವಾಗಿ ದಕ್ಷಿಣ ಭಾರತದ ರಾಜ್ಯಗಳು ಬೃಹತ್ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ರಸ್ತೆ ಸಂಪರ್ಕವನ್ನೂ ಅಭಿವೃದ್ಧಿಪಡಿಸುತ್ತಿವೆ. ಈ ಯೋಜನೆ ಕಾರ್ಯರೂಪಕ್ಕೆ ಬಂದ ನಂತರ ಲಾಜಿಸ್ಟಿಕ್ ಕ್ಷೇತ್ರದ ಬೆಳವಣಿಗೆ ಸಾಕಾರಗೊಳ್ಳಲಿದೆ ಎಂದು ಚಂದ್ರಬಾಬು ನಾಯ್ಡು ವಿಶ್ವಶಸ ವ್ಯಕ್ತಪಡಿಸಿದ್ದಾರೆ.