ಸುಳ್ಯ : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಜಾಧ್ವನಿ ಕರ್ನಾಟಕ ಮತ್ತು ಸುಳ್ಯ ಸರಕಾರಿ ಪದವಿ ಕಾಲೇಜು ಕೊಡಿಯಾಲಬೈಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ, ಕಾಲೇಜಿನ ಸಭಾಂಗಣದಲ್ಲಿ “ಸ್ವಾತಂತ್ರ್ಯ ಮತ್ತು ಸಂವಿಧಾನದ ಮಹತ್ವ” ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತೀಶ್ ಕೆ. ಆರ್. ವಹಿಸಿದ್ದರು. ನೆಹರು ಸ್ಮಾರಕ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪೂವಪ್ಪ ಕಣಿಯೂರು ಮುಖ್ಯ ಭಾಷಣಕಾರರಾಗಿ ಸಂವಾದವನ್ನು ನಡೆಸಿಕೊಟ್ಟರು. ಪ್ರಜಾಧ್ವನಿ ಕರ್ನಾಟಕದ ಸದಸ್ಯರಾದ ಅಶೋಕ್ ಎಡಮಲೆಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನಿರ್ದೇಶಕ ಕೆ. ಪಿ. ಜಾನಿ ಹಾಗೂ ಪ್ರಜಾಧ್ವನಿ ಕರ್ನಾಟಕ ಸುಳ್ಯ ಸಂಚಾಲಕ ಗೋಪಾಲ್ ಪೆರಾಜೆ ಸಂದರ್ಭೋಚಿತವಾಗಿ ಮಾತನಾಡಿದರು.
ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಕ್ರಿಯವಾಗಿ ಭಾಗವಹಿಸಿ, ಭ್ರಷ್ಟಾಚಾರ, ಪಕ್ಷಪಾತ, ಮತ್ತು ತಾರತಮ್ಯದಂತಹ ಸಮಾಜದ ಸಮಸ್ಯೆಗಳ ಕುರಿತು ವಿಚಾರ ವಿನಿಮಯ ನಡೆಸಿದರು.
ಕಾರ್ಯಕ್ರಮದಲ್ಲಿ ಪ್ರಜಾಧ್ವನಿ ಕರ್ನಾಟಕ ಸದಸ್ಯರಾದ ದಿವಾಕರ್ ಪೈ, ಶ್ರೀಧರ್ ಕಡೆಪಾಲ, ಕರುಣಾಕರ ಪಲ್ಲತಡ್ಕ, ಪ್ರಕಾಶ್ ಪಾತೆಟ್ಟಿ, ಎ.ಕೆ.ಇಬ್ರಾಹಿಂ, ಭರತ್ ಕುಕ್ಕುಜಡ್ಕ, ವಸಂತ ಪೆಲ್ತಡ್ಕ, ಲಕ್ಷ್ಮೀಶ ಗಬ್ಲಡ್ಕ, ಮಾಧವ ಸುಳ್ಯಕೋಡಿ, ಮಂಜುನಾಥ್ ಮಡ್ತಿಲ, ಸಾಹುಕಾರ್ ಅಶ್ರಫ್, ಪ್ರಮೀಳ ಪೆಲ್ತಡ್ಕ, ಲಲನ ಕೆ.ಅರ್, ಲೆಸ್ಸಿ ಮೊನಾಲಿಸ, ಮಹೇಶ್ ಬೆಳ್ಳಾರ್ಕರ್, ಕೇಶವ ಮೊರಂಗಲ್ಲು, ರಾಜು ಪಂಡಿತ್, ಹಮೀದ್ ಕುತ್ತಮೊಟ್ಟೆ ಮತ್ತು ಲೋಲಾಕ್ಷ ಭೂತಕಲ್ಲು, ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರುಗಳು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.