ತ್ರಿಶೂರ್‌ ಕ್ಷೇತ್ರದಲ್ಲಿ ಕೇಂದ್ರ ಸಚಿವ ಸುರೇಶ್ ಗೋ‍ಪಿ ಗೆಲುವಿಗೆ ಮತ ಕಳವು ಕಾರಣ;  ಕೇರಳ ವಿಪಕ್ಷ ನಾಯಕ ವಿ.ಡಿ ಸತೀಶನ್ ಆರೋಪ

Most read

ತ್ರಿಶೂರ್: 2024ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಸುರೇಶ್ ಗೋ‍ಪಿ ಅವರೂ ಮತ ಕಳ್ಳತನದಿಂದಲೇ ಗೆದ್ದಿದ್ದಾರೆ ಎಂದು ಕೇರಳ ವಿಧಾನಸಭೆ ಪ್ರತಿಪಕ್ಷದ ನಾಯಕ ವಿ.ಡಿ ಸತೀಶನ್ ಗಂಭೀರ ಆರೋಪ ಮಾಡಿದ್ದಾರೆ.

ಅಸ್ತಿತ್ವವೇ ಇಲ್ಲದ ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ತ್ರಿಶೂರ್ ಕ್ಷೇತ್ರದಲ್ಲಿ ಗೆದ್ದಿದೆ. ಈ ಗೆಲುವಿಗೆ ಭಾರಿ ಪ್ರಮಾಣದ ಮತ ಕಳ್ಳತನವೇ ಕಾರಣ ಎಂದು ಅವರು ಆಪಾದಿಸಿದರು. ರಾಜ್ಯದ ತ್ರಿಶೂರ್ ಹಾಗೂ ಇತರ ಲೋಕಸಭಾ ಕ್ಷೇತ್ರಗಳಲ್ಲಿ ನಡೆದಿರುವ ಮತ ಕಳ್ಳತನ ಕುರಿತು ತನಿಖೆ ನಡೆಸಬೇಕು. ಆರ್‌ ಎಸ್‌ ಎಸ್‌ ಅಕ್ರಮ ಮೂಲಗಳ ಮೂಲಕ ಮತಗಳನ್ನು ಸೇರಿಸಿದೆ ಎಂದು ಹಲವಾರು ದೂರುಗಳು ಕೇಳಿಬಂದಿವೆ. ಈ ಬಗ್ಗೆ ಯುಡಿಎಫ್ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

2024ರ  ಲೋಕಸಭಾ ಕ್ಷೇತ್ರದಲ್ಲಿ ತ್ರಿಶೂರ್‌ ನಲ್ಲಿ ಬಿಜೆಪಿ ಅಭ್ಯರ್ಥಿ ನಟ ರಾಜಕಾರಣಿ ಸುರೇಶ್ ಗೋಪಿ  ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿಗಳನ್ನು ಪರಾಭವಗೊಳಿಸಿದ್ದರು. ಈ ಫಲಿತಾಂಶ ರಾಜ್ಯಾದ್ಯಂತ ಅಚ್ಚರಿಗೆ ಕಾರಣವಾಗಿತ್ತು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1,00,250 ಮತಗಳ್ಳತನ ನಡೆದಿದೆ ಎಂದು ರಾಹುಲ್‌ ಗಾಂಧಿ ದಾಖಲೆಗಳ ಸಹಿತ ಸಾಬೀತುಪಡಿಸಿದ್ದಾರೆ.

More articles

Latest article