ಧರ್ಮಸ್ಥಳ ಹತ್ಯೆಗಳು: ಹೊಸ ಸ್ಥಳ ತೋರಿಸಿದ ಅನಾಮಿಕ ದೂರುದಾರ; ಶೋಧ ಆರಂಭ

Most read

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಹತ್ಯೆ ನಡೆಸಿರುವ ಹೆಣಗಳನ್ನು ಹೂತುಹಾಕಿರುವುದಾಗಿ ಹೇಳಿರುವ ಅನಾಮಿಕ ದೂರುದಾರ ಇಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ ಐ ಟಿ) ಇಂದು ಧರ್ಮಸ್ಥಳದ ಬೋಳಿಯಾರು ಎಂಬ ಗ್ರಾಮದಲ್ಲಿ ಹೊಸ ಸ್ಥಳವನ್ನು ತೋರಿಸಿದಾನೆ. ಈ ಈ ಜಾಗಕ್ಕೆ 15 ನೇ ಪಾಯಿಂಟ್‌ ಎಂದು ಹೆಸರಿಸಲಾಗಿದ್ದು, ಶವಗಳ ಕುರುಹುಗಳ ಪತ್ತೆಗಾಗಿ ಶೋಧ ಆರಂಭಿಸಿದೆ.

ಸಾಕ್ಷಿ ದೂರುದಾರನ ಜತೆ ತನಿಖಾಧಿಕಾರಿ ಎಸ್‌ ಪಿ ಜಿತೇಂದ್ರ ಕುಮಾರ್ ದಯಾಮ ಮತ್ತು ಪುತ್ತೂರು ವಿಭಾಗದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಅವರೂ ಹಾಜರಿದ್ದರು.

ಸಾಕ್ಷಿ ದೂರುದಾರ ಗುರುತಿಸಿದ್ದ 13ನೇ ಜಾಗ ಹೊರತುಪಡಿಸಿ, ಉಳಿದೆಲ್ಲ ಸ್ಥಳಗಳಲ್ಲಿ ಉತ್ಖನನವನ್ನು ಎಸ್‌ ಐಟಿ ಪೂರ್ಣಗೊಳಿಸಿದೆ. ಎರಡು ಸ್ಥಳಗಳಲ್ಲಿ ಮಾತ್ರ ಕುರುಹುಗಳು ಕಂಡು ಬಂದಿದ್ದು, ಉಳಿದ ಸ್ಥಳಗಳಲ್ಲಿ ಯಾವುದೇ ಅವಶೇಷ ಪತ್ತೆಯಾಗಿಲ್ಲ.  

ಈ ಮಧ್ಯೆ ಸಾಕ್ಷಿ ದೂರುದಾರ ನನಗೆ ಜೀವ ಬೆದರಿಕೆ ಇರುವುದರಿಂದ ಗನ್ ಮ್ಯಾನ್ ಹಾಗೂ ಭದ್ರತೆ ಒದಗಿಸಿ ಎಂದು ಎಸ್‌ ಐಟಿ ತನಿಖಾ ತಂಡಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಭದ್ರತೆ ಒದಗಿಸಿದ್ದಾರೆಂದು ಎಸ್ಐಟಿ ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಲಾಗಿದೆ. ಇದರಿಂದ ಎಸ್‌ ಐಟಿಯೇ ನೇರವಾಗಿ ದೂರುಗಳನ್ನು ದಾಖಲಿಸಿಕೊಳ್ಳುವ ಅವಕಾಶ ಲಭ್ಯವಾಗಿದೆ. ಇದುವರೆಗೂ ಧರ್ಮಸ್ಥಳ ಅಥವಾ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಬೇಕಾಗಿತ್ತು.

More articles

Latest article