ಮಹಿಳೆಯರಿಗೆ ಗೌರವ ನೀಡುವ ಜಾಯಮಾನ ಬಿಜೆಪಿಯ ಡಿ ಎನ್ ಎ ನಲ್ಲಿ ಇಲ್ಲವೇ ಇಲ್ಲ: ಹರಿಪ್ರಸಾದ್‌ ತಿರುಗೇಟು

Most read

ಬೆಂಗಳೂರು: ತಮ್ಮನ್ನು ಟೀಕಿಸಿರುವ ಬಿಜೆಪಿ ಮುಖಂಡ ಶಾಸಕ ವಿ.ಸುನಿಲ್‌ ಕುಮಾರ್‌ ಅವರಿಗೆ ಕಾಂಗ್ರೆಸ್‌ ಮುಖಂಡ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ತಕ್ಕ ತಿರುಗೇಟು ನೀಡಿದ್ದಾರೆ.

ಶಾಸಕ @karkalasunil ಸುನೀಲ್ ಕುಮಾರ್ ಅವರೇ, ನಾನು ಚುನಾವಣಾ ಕಲಿ ಆಗದೇ ಇದ್ದರೂ ಪರವಾಗಿಲ್ಲ, ಆದರೆ ನಿಮ್ಮಂತೆ “ಪರಶುರಾಮನ” ಕಲಿಯಂತೂ ಆಗಲಾರೆ. ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ಅರ್ಧನಾರೀಶ್ವರನ್ನಾದರೂ ಮಾಡಲಿ ಎಂದು ಹೇಳುವ ಬದಲು “ಅರ್ಧನಾರೀಶ್ವರ ಪ್ರತಿಮೆ” ಮಾಡಲಿ ಎಂದು ಹೇಳಿಕೆ ಕೊಟ್ಟಿದ್ದರೆ ಬಹುಶಃ ನಿಮಗೆ ಲಾಭವಾಗುತ್ತಿತ್ತು.

ನಾರಿ ಶಕ್ತಿ, ನಾರಿ ತತ್ವದ ಉಪದೇಶ ನಿಮ್ಮ ಸಂಘದ ಸರ ಸಂಘ ಸಂಚಾಲಕರಿಗೆ ಮಾಡುವಿರಂತೆ, ಇಲ್ಲಿವರೆಗೂ ಬಿಜೆಪಿ ಪಕ್ಷ ಒಬ್ಬೇ ಒಬ್ಬ ಮಹಿಳೆಯನ್ನು ಏಕೆ ಅಧ್ಯಕ್ಷರನ್ನಾಗಿ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರ ಇದ್ಯಾ? ಅಥವಾ “ಮಹಿಳೆ ನಾಲ್ಕು ಗೋಡೆಯಲ್ಲೇ ಬದುಕಬೇಕು” ಎಂದು ಮೋಹನ್ ಭಾಗವತ್ ಹೇಳಿಕೆಯಲ್ಲೇ ಉತ್ತರವಿದ್ಯಾ?

“ಬೇಟಿ ಬಚಾವೋ” ಎಂದು ಕೇಂದ್ರದ ಯೋಜನೆ ಇರುವುದೇ ಬಿಜೆಪಿ ನಾಯಕರಿಂದ ಮಹಿಳೆಯರಿಗೆ ರಕ್ಷಿಸಿಕೊಳ್ಳಲು ಅಲ್ಲವೇ.? ಅಸಲಿಗೂ ನಾರಿ ಶಕ್ತಿಯಿಂದ ಬೆದರಿ ಬೆಂಡಾಗಿರುವುದು ನಿಮ್ಮದೇ ಪಕ್ಷದ ನಾಯಕರೇ ಹೊರತು ಸಾಮಾನ್ಯ ಜನರಲ್ಲ. ಅಷ್ಟಕ್ಕೂ ನಿಮ್ಮ ಪಕ್ಷದ ಘಟಾನುಘಟಿ  19 ನಾಯಕರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಲು ಯಾವ ನಾರಿ ಶಕ್ತಿ ಅಡ್ಡ ಬಂದಿದೆ? ಒಮ್ಮೆ ಜನರಿಗೆ ಹೇಳುವ ಧೈರ್ಯ ಮಾಡಿ.

ಮಹಿಳೆಯರಿಗೆ ಗೌರವ ನೀಡುವ, ಸ್ಥಾನಮಾನ ಕೊಡುವ, ಸ್ವಾಭಿಮಾನದ ಬದುಕಿಗೆ ಅರ್ಥ ನೀಡುವ ಯಾವ ಮಾನದಂಡವೂ ಬಿಜೆಪಿಯ ಡಿ ಎನ್ ಎ ನಲ್ಲೇ ಇಲ್ಲ. ಅಷ್ಟಕ್ಕೂ ರಾಮ-ಪರಶುರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅಮಾಯಕ ಜನರ ತೆರಿಗೆ ಹಣವನ್ನು ಜೇಬಿಗೆ ಇಳಿಸಿಕೊಂಡಂತೆ ಸುಲಭವಲ್ಲ ನಾರಿ ಶಕ್ತಿ ಬಗ್ಗೆ ಮಾತಾಡುವುದು. ಕರಾವಳಿಯ ಬಿಜೆಪಿ ಯುವಕರ ಪಟಾಲಂ ಮಹಿಳೆಯರನ್ನು, ಯುವತಿಯರನ್ನು ಯಾಮಾರಿಸಿ ಅತ್ಯಾಚಾರ ನಡೆಸಿ ಮೋಸ ಮಾಡುತ್ತಿರುವುದರ ವಿರುದ್ಧ ತುಟಿ ಬಿಚ್ಚದ ನಿಮಿಗೆ ಅದ್ಯಾವ ನಾರಿ ಶಕ್ತಿ, ನಾರಿ ತತ್ವದ ಬಗ್ಗೆ ಮಾತಾಡುವ ನೈತಿಕತೆ ಇದೆ? ಎಂದು ಹರಿಪ್ರಸಾದ್‌ ಪ್ರಶ್ನಿಸಿದ್ದಾರೆ.

More articles

Latest article