ಬಾಕಿ ಬಿಡುಗಡೆಗೆ ಆಗ್ರಹ: ಲಾರಿ ಮುಷ್ಕರ; ಅನ್ನ ಭಾಗ್ಯ ಅಕ್ಕಿ ಸಾಗಣೆಗೆ ಅಡಚಣೆ

Most read

ಬೆಂಗಳೂರು: ಅನ್ನ ಭಾಗ್ಯ ಅಕ್ಕಿ ಸಾಗಣೆ ಮಾಡಿದ ಸುಮಾರು 260 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಅಕ್ಕಿ ಸಾಗಿಸುವ ಲಾರಿಗಳು ನಿನ್ನೆಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿವೆ. ಲಾರಿ ಮುಷ್ಕರ ಹೀಗೆಯೇ ಮುಂದುವರೆದರೆ  ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಗೆ ಈ ತಿಂಗಳು ತೊಂದರೆಯಾಗುವ ಸಾಧ್ಯತೆಗಳಿವೆ. ಸುಮಾರು 4 ಸಾವಿರ ಲಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿವೆ.

ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್‌ಗಳ ಸಂಘ ಮತ್ತು ಚಿಲ್ಲರೆ ಸಾರಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ  ಪ್ರತಿಕ್ರಿಯೆ ನೀಡಿ ಫೆಬ್ರವರಿಯಿಂದ ಬಾಕಿ ಹಣ ಹಣ ಬಿಡುಗಡೆ ಮಾಡಿಲ್ಲ. ಜೂನ್ 19 ರಂದು, ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜುಲೈ 5 ರ ಮೊದಲು ಸಾಗಣೆ ಮಾಡಿದ ಬಾಕಿ ಹಣವನ್ನು ಪಾವತಿಸುವುದಾಗಿ ಭರವಸೆ ನೀಡಿದ್ದರು. ಆದರೆ ಿದುವರೆಗೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಫೆಬ್ರವರಿಯಿಂದ ಜೂನ್ ವರೆಗೆ, ಸುಮಾರು 260 ಕೋಟಿ ರೂ.ಗಳನ್ನು ಪಾವತಿಸಬೇಕಾಗಿದೆ ಟ್ರಕ್ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಸಾರಿಗೆ ವೆಚ್ಚವನ್ನು ಪೂರೈಸಲು ಅವರು ಸಾಲ ಮಾಡಿದ್ದಾರೆ. ಬ್ಯಾಂಕ್‌ ಗೆ ಇಎಂಐ ಪಾವತಿಸಿಲ್ಲ ಎಂದು ಷಣ್ಮುಗಪ್ಪ ತಿಳಿಸಿದ್ದಾರೆ.

More articles

Latest article