ಇರಾನ್‌ ಕ್ರಿಪ್ಟೊ ಕರೆನ್ಸಿ ಹ್ಯಾಕ್;‌ ರೂ.781 ಕೋಟಿ ಹಣ ಖಾಲಿ; ಇಸ್ರೇಲ್‌ ಕೈವಾಡ ಶಂಕೆ

ದುಬೈ: ಹ್ಯಾಕರ್‌ ಗಳ ಗುಂಪೊಂದು ಇರಾನ್‌ ನ ಅತ್ಯಂತ ದೊಡ್ಡ ಕ್ರಿಪ್ಟೊ ಕರೆನ್ಸಿ ಎಕ್ಸ್‌ಚೇಂಜ್‌ ‘ನೋಬಿಟೆಕ್ಸ್‌’ ಅನ್ನು ಹ್ಯಾಕ್‌ ಮಾಡಿ, 90 ದಶಲಕ್ಷ ಡಾಲರ್‌ (ಅಂದಾಜು ರೂ.781 ಕೋಟಿ) ನಷ್ಟು ಮೊತ್ತವನ್ನು ಖಾಲಿ ಮಾಡಿದೆ ಎಂದು ತಿಳಿದು ಬಂದಿದೆ. ಹ್ಯಾಕರ್‌ ಗಳು ಇಸ್ರೇಲ್‌ನೊಂದಿಗೆ ನಂಟು ಹೊಂದಿರಬಹುದು ಎಂಬ ಶಂಕೆ ಉಂಟಾಗಿದೆ. ಇಸ್ರೇಲ್‌ ಕೈವಾಡವನ್ನು ತಳ್ಳಿ ಹಾಕುವಂತಿಲ್ಲ ಎಂದು ಬ್ಲಾಕ್‌ ಚೈನ್‌ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಂಪನಿ ಎಲಿಪ್ಟಿಕ್ ತಿಳಿಸಿದೆ.

ಹ್ಯಾಕ್‌ ಗೆ ಒಳಗಾಗಿರುವುದನ್ನು ನೋಬಿಟೆಕ್ಸ್‌ ಖಚಿತಪಡಿಸಿದೆ. ತನ್ನ ಆ್ಯಪ್‌ ಹಾಗೂ ವೆಬ್‌ ಸೈಟ್‌ ಕಾರ್ಯಾಚರಣೆಯಲ್ಲಿ ತೊಂದರೆ ಕಂಡುಬಂದಿದೆ ಎಂದು ಅದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ.

ಕ್ರಿಪ್ಟೊ ಕರೆನ್ಸಿ ಎಕ್ಸ್‌ ಚೇಂಜ್ ಹ್ಯಾಕ್‌ ಮಾಡಲಾಗಿದೆ ಎಂದು ಹ್ಯಾಕರ್‌ ಗಳ ಗುಂಪು, ಸಾಮಾಜಿಕ ಮಾಧ್ಯಮ ‘ಟೆಲಿಗ್ರಾಮ್’ ಖಾತೆಯಲ್ಲಿ ಹೇಲಿಕೊಂಡಿದೆ. ತನ್ನ ಪರಮಾಣು ಕಾರ್ಯಕ್ರಮದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಧಿಕ್ಕರಿಸಲು ಇರಾನ್‌ ಸರ್ಕಾರಕ್ಕೆ  ನೋಬಿಟೆಕ್ಸ್‌ ಸಹಾಯ ಮಾಡಿದೆ ಹಾಗೂ ಹಣವನ್ನು ಉಗ್ರರಿಗೆ ವರ್ಗಾಯಿಸಿದೆ ಎಂದು ಹ್ಯಾಕರ್‌ ಗಳ ಗುಂಪು ‘ಎಕ್ಸ್‌’ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಆರೋಪಿಸಿದೆ.

ಹ್ಯಾಕ್‌ ಮೂಲಕ ಲಪಟಾಯಿಸಿರುವ ಹಣವನ್ನು ಇರಾನ್‌ ನ ರೆವಲ್ಯೂಷನರಿ ಗಾರ್ಡ್ ವಿರುದ್ಧ ಟೀಕೆ ಮಾಡುತ್ತಿದ್ದ ವ್ಯಕ್ತಿ ಅಥವಾ ಗುಂಪುಗಳಿಗೆ ಸೇರಿದ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಕೃತ್ಯವು ಹಣಕ್ಕಾಗಿ ಮಾಡಿರುವುದಿಲ್ಲ. ನೋಬಿಟೆಕ್ಸ್‌  ಗೆ ಬಲವಾದ ರಾಜಕೀಯ ಸಂದೇಶವೊಂದನ್ನು ಕಳುಹಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

More articles

Latest article

Most read