ಹಾಲಿನ ಟ್ಯಾಂಕರ್ ನಲ್ಲಿ ಬಿಹಾರಕ್ಕೆ ಮದ್ಯ ಸಾಗಣೆ: ಉತ್ತರ ಪ್ರದೇಶ ಪೊಲೀಸರಿಂದ ಇಬ್ಬರ ಬಂಧನ

ಮೌ(ಉತ್ತರ ಪ್ರದೇಶ): ಹಾಲಿನ ಟ್ಯಾಂಕರ್ ವಾಹನದಲ್ಲಿ ಬಿಹಾರಕ್ಕೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪದಡಿಯಲ್ಲಿಇಬ್ಬರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಹಾಲಿನ ಟ್ಯಾಂಕರ್‌ ಒಳಗೆ ಪ್ರತ್ಯೇಕ ಬಾಕ್ಸ್‌ ಮಾಡಿಸಿ ಅದರೊಳಗೆ ಮದ್ಯವನ್ನು ಅಡಗಿಸಿ ಉತ್ತರ ಪ್ರದೇಶದಿಂದ ಬಿಹಾರಕ್ಕೆ ಸಾಗಿಸಲಾಗುತ್ತಿತ್ತು. ಗೋರಖಪುರ – ವಾರಾಣಸಿ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹಾಲಿನ ಟ್ಯಾಕಂರ್‌ ನಲ್ಲಿದ್ದ 10 ಲಕ್ಷ ಮೌಲ್ಯದ 173 ಬಾಕ್ಸ್‌ ಕಳ್ಳಬಟ್ಟಿ ಹಾಗೂ ವಿಸ್ಕಿ ಬಾಟಲ್‌ಗಳಿದ್ದ 8 ಪೆಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಲಿನ ಟ್ಯಾಂಕರ್‌ ನಂತೆ ಕಾಣುವ ವಾಹನದೊಳಗೆ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಮದ್ಯದ ಬಾಟಲ್ ಮೇಲಿದ್ದ ಸ್ಕ್ಯಾನರ್ ಮೂಲಕ ಗಾಜಿಪುರ ಮೂಲದಿಂದ ಸರಬರಾಜಾಗಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶ ಹಾಗೂ ಬಿಹಾರದ ಗಡಿಯಲ್ಲಿ ಮದ್ಯ ವಶಪಡಿಸಿಕೊಳ್ಳಲಾಗಿದೆ. ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧವಿದ್ದು ಮಾರಾಟ ಮಾಡುವಂತಿಲ್ಲ.  ಬಿಹಾರದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯವನ್ನು ಕಳ್ಳಸಾಗಣೆ ಮಾಡಲಾಗುತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ

More articles

Latest article

Most read