ಕನಕಪುರ ರಸ್ತೆಯಲ್ಲಿ ಬೈಕ್ ಮೇಲೆ ಬಿದ್ದ ಸಾರಿಗೆ ಸಂಸ್ಥೆ ಬಸ್: ಪಿಎಸ್‌ ಐ ಸೇರಿ ಇಬ್ಬರ ಸಾವು

Most read

ರಾಮನಗರ: ರಾಮನಗರ ಜಿಲ್ಲೆಯ ಬೆಂಗಳೂರು- ಕನಕಪುರ ರಸ್ತೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್‌ ಮೋರಿಗೆ ಪಲ್ಟಿ ಹೊಡೆದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿ‌ ಇಬ್ಬರು ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸ್‌ ಐ ನಾಗರಾಜ್‌ ಹಾಗೂ ಮತ್ತೊಬ್ಬರು ಅಸು ನೀಗಿದ್ದಾರೆ.
ಗಾಯಾಳುಗಳ ಪೈಕಿ ಒಬ್ಬರನ್ನು ನಿಮ್ಹಾನ್ಸ್ ಆಸ್ಪತ್ರೆಗೆ, ಮೂವರನ್ನು ದಯಾನಂದ ಸಾಗ‌ರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಎಸ್‌ ಆರ್‌ ಟಿಸಿ ಬಸ್‌ ಇಂದು ಬೆಳಿಗ್ಗೆ ಕನಕಪುರದಿಂದ ಬೆಂಗಳೂರಿಗೆ ಹೋಗುತ್ತಿತ್ತು. ಕಗ್ಗಲೀಪುರ ಠಾಣೆ ಸಮೀಪ ನಿಯಂತ್ರಣ ಕಳೆದುಕೊಂಡ ಚಾಲಕ, ರಸ್ತೆ ವಿಭಜಕದ ಮೇಲೆ ಹತ್ತಿಸಿದ್ದಾನೆ. ಪಕ್ಕದ ರಸ್ತೆಗೆ ನುಗ್ಗಿದ ಬಸ್, ಎದುರಿಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ನಾಗರಾಜ್ ಮತ್ತು ಮತ್ತೊಬ್ಬರು ಇದ್ದ ಬೈಕ್ ಗೆ ಡಿಕ್ಕಿ ಹೊಡೆದು, ಮೋರಿಯೊಳಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article