ಪಾಕ್‌ ಗೆ ಸೂಕ್ಷ್ಮ ಮಾಹಿತಿ ಹಂಚಿಕೆ ಆರೋಪ: ಯೂಟ್ಯೂಬರ್ ಜ್ಯೋತಿ ರಾಣಿ ವಿರುದ್ಧ ಪ್ರಕರಣ ದಾಖಲು

Most read

ನವದೆಹಲಿ: ಪಾಕಿಸ್ತಾನಕ್ಕೆ ಭಾರತದ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದಡಿಯಲ್ಲಿ (ಬೇಹುಗಾರಿಕೆ) ಯೂಟ್ಯೂಬರ್ ಜ್ಯೋತಿ ರಾಣಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಹರಿಯಾಣ ರಾಜ್ಯದ ಹಿಸಾರ್ ನಿವಾಸಿ ಹರೀಶ್ ಕುಮಾರ್ ಅವರ ಪುತ್ರಿ ಜ್ಯೋತಿ ರಾಣಿ ಅವರನ್ನು ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿ ರವಾನಿಸಿದ ಆರೋಪದಡಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜ್ಯೋತಿ ರಾಣಿ ಅವರು ದೆಹಲಿಯಲ್ಲಿ ಪಾಕಿಸ್ತಾನ ಅಧಿಕಾರಿ ಅಹ್ಸಾನ್ ಉರ್ ರಹೀಮ್ ಅವರನ್ನು ಭೇಟಿಯಾಗಿದ್ದರು. ಜತೆಗೆ, ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿರುವುದು ಖಚಿತವಾಗಿದೆ. ಆದ್ದರಿಂದ ಜ್ಯೋತಿ ರಾಣಿ ವಿರುದ್ಧ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

More articles

Latest article