ಕರ್ನಲ್‌ ಸೋಫಿಯಾ ವಿರುದ್ಧ ವಿವಾದಾತ್ಮಕ ಹೇಳಿಕೆ; ವಿಜಯ್ ಶಾ ವಿರುದ್ಧ ಎಫ್ ಐ ಆರ್‌; ತಡೆ ಕೋರಿ ಸುಪ್ರೀಂ ಕೋರ್ಟ್‌ ಗೆ ಅರ್ಜಿ

Most read

ಭೋಪಾಲ್‌: ಕರ್ನಲ್‌ ಸೋಫಿಯಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ, ಮಧ್ಯಪ್ರದೇಶ ಸರ್ಕಾರದ ಸಚಿವ ವಿಜಯ್‌ ಶಾ ತಮ್ಮ ವಿರುದ್ಧದ ಎಫ್‌ ಐ ಆರ್‌ ದಾಖಲಾಗಿದೆ. ರಾಜ್ಯ ಹೈಕೋರ್ಟ್‌ ಎಫ್‌ ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ಅದರನ್ವಯ ಇಂಧೋರ್‌ ನಲ್ಲಿ ಎಫ್‌ ಐಆರ್‌ ದಾಖಲಿಸಲಾಗಿದೆ. ತಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್‌ ಐ ಆರ್‌ ಗೆ ತಡೆ ಕೋರಿ ವಿಜಯ್‌ ಶಾ  ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ವಿಜಯ್‌ ಶಾ ಕೋರಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಗವಾಯಿ ಮತ್ತು ನ್ಯಾ. ಅಗಸ್ಟೀನ್ ಜಾರ್ಜ್ ಅವರು ನಾಳೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ವಿಜಯ್‌ ಶಾ ವಕೀಲರು ಹೇಳಿದ್ದಾರೆ. ನೀವು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದೀರಿ? ನೀವು ಸರ್ಕಾರದ ಜವಾಬ್ದಾರಿಯುತ ಸಚಿವರಲ್ಲವೇ? ಎಂದು ಸಚಿವರ ಕುರಿತಾಗಿ ನ್ಯಾಯಪೀಠ ಶಾ ವಕೀಲರನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.

ಶಾ ವಿರುದ್ಧ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ನಂತರ ಎಚ್ಚೆತ್ತುಕೊಂಡ ಶಾ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದಲ್ಲಿ, ಹತ್ತು ಬಾರಿ ಕ್ಷಮೆ ಯಾಚಿಸಲು ನಾನು ಸಿದ್ಧ. ಕರ್ನಲ್‌ ಖುರೇಷಿ ಅವರನ್ನು ನನ್ನ ಸಹೋದರಿಗಿಂತಲೂ ಹೆಚ್ಚು ಗೌರವಿಸುತ್ತೇನೆ ಎಂದು ತಿಪ್ಪೆ ಸಾರಿಸಿದ್ದಾರೆ.

More articles

Latest article