ವಿದೇಶಿ ಪ್ರಜೆಯನ್ನು ಬೆದರಿಸಿ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ

Most read

ಬೆಂಗಳೂರು: ಕ್ಯಾಮರೂನ್ ದೇಶದ ಪ್ರಜೆಯನ್ನು ಬೆದರಿಸಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಿಜ್ವಾನ್ ಪಾಶಾ (25) ಹಾಗೂ ಕೃತಿಕ್ ಪ್ರೀತಂ (25) ಬಂಧಿತ ಆರೋಪಿಗಳು. ಇವರಿಂದ ಪಾಸ್‌ ಪೋರ್ಟ್, ರೂ.86 ಸಾವಿರ ಹಣ, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ತಿಂಗಳು ಕ್ಯಾಮರೂನ್ ದೇಶದ ಪ್ಯಾಟ್ರೀಸ್ ಕ್ಯಾಂಡೇಮ್ ಕೊಡಿಗೇಹಳ್ಳಿಯ ಹೊರ ವರ್ತುಲ ರಸ್ತೆಯಲ್ಲಿ ನಿಂತಿದ್ದರು. ಆಗ ಬೈಕ್‌ ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಮಾರಕಾಸ್ತ್ರಗಳನ್ನು ತೋರಿಸಿ ದ್ವಿಚಕ್ರ ವಾಹನ, ಪಾಸ್‌ಪೋರ್ಟ್, ನಗದು ಹಾಗೂ ಇತರೆ ದಾಖಲೆಗಳಿದ್ದ ಬ್ಯಾಗ್‌ ಅನ್ನು ಕಿತ್ತುಕೊಂಡು ಪರಾರಿ ಆಗಿದ್ದರು. ಪ್ಯಾಟ್ರೀಸ್‌ ಕ್ಯಾಂಡೇಮ್ ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

More articles

Latest article