ಛತ್ತೀಸ್‌ ಗಢದಲ್ಲಿ ಭೀಕರ ಅಪಘಾತ: 4ಮಕ್ಕಳು, 9 ಮಹಿಳೆಯರು ಸೇರಿ 13 ಮಂದಿ ಸಾವು

Most read

ರಾಯಪುರ (ಛತ್ತೀಸ್‌ಗಢ): ಛತ್ತೀಸ್‌ ಗಢದ ರಾಯಪುರದಲ್ಲಿ ಟ್ರೇಲರ್ ಟ್ರಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 13 ಮಂದಿ ಸಾವನ್ನಪ್ಪಿರುವ ದುರಂತ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ರಾಯ್ಪುರ ಜಿಲ್ಲೆಯ ರಾಯ್ಪುರ-ಬಲೋದಬಜಾರ್ ರಸ್ತೆಯ ಸರಗಾಂವ್ ಸಮೀಪ ಅಪಘಾತ ಸಂಭವಿಸಿದ್ದು, ನಾಲ್ವರು ಮಕ್ಕಳು ಮತ್ತು ಒಂಬತ್ತು ಮಹಿಳೆಯರು ಸೇರಿ 13 ಮಂದು ಮೃತಪಟ್ಟಿದ್ದಾರೆ.

ಜಿಲ್ಲೆಯ ಚಟೌಡ್ ಗ್ರಾಮದ ಕುಟುಂಬವೊಂದು ಕುಟುಂಬದ ಸಮಾರಂಭದಲ್ಲಿ ಭಾಗವಹಿಸಲು ಬನ್ಸಾರಿ ಗ್ರಾಮಕ್ಕೆ ತೆರಳುತ್ತಿತ್ತು. ಕಾರ್ಯಕ್ರಮ ಮುಗಿಸಿ ತಡರಾತ್ರಿ ಟ್ರಕ್ ​​ನಲ್ಲಿ ಹಿಂತಿರುಗುವಾಗ ಖರೋರಾ ಪೊಲೀಸ್ ಠಾಣೆ ಪ್ರದೇಶದ ಸರಗಾಂವ್ ಎಂಬಲ್ಲಿ  ಟ್ರೇಲರ್‌ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ರಾಯ್ಪುರದ ಡಾ. ಭೀಮರಾವ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ರಾಯ್ಪುರ ಜಿಲ್ಲಾಧಿಕಾರಿ ಗೌರವ್ ಸಿಂಗ್ ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

More articles

Latest article