ಬೆಂಗಳೂರು: ʻಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನತಂರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಡೀಸೆಲ್ ಬೆಲೆ 41.29 ಇತ್ತು. ಆದರೆ, ಈಗಾ ಎಷ್ಟಾಗಿದೆ ಎನ್ನುವುದನ್ನು ಅರಿಯಬೇಕು.ʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತಾನಾಡಿದರು.
ನಗರದ ಫ್ರೀಡಂ ಪಾರ್ಕ್ ನಲ್ಲಿ ಗುರುವಾರ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ʼಕೋರೊನಾ ಬಂದ ಸಂದರ್ಭದಲ್ಲಿ 2022ರಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚು ಮಾಡಿದ್ದೀರಿ. ಸಬ್ಸಿಡಿ ಯಾಕೆ ತೆಗೆದು ಹಾಕಿದ್ದೀರಿ ಎಂದು ಬಿಜೆಪಿ ಸರ್ಕಾರವನ್ನು ಮುಖ್ಯಮಂತ್ರಿಯವರು ಪ್ರಶ್ನೆ ಮಾಡಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಯುಪಿಎ ಸರ್ಕಾರ 2013-14ರಲ್ಲಿ ಕಚ್ಚಾತೈಲದ ಬೆಲೆ $140, ಪೆಟ್ರೋಲ್ 63.77 ರೂ, ಡಿಸೇಲ್ 41.29 ರೂ, ಗ್ಯಾಸ್ ದರ 410 ರೂ, ಚಿನ್ನದ ಬೆಲೆ 10 ಗ್ರಾಂಗೆ 26,400 ರೂ ಇತ್ತು. ಆದರೆ ಇಂದು ಎನ್ ಡಿ ಎ ಸರ್ಕಾರ 2024-25 ರಲ್ಲಿ ಕಚ್ಚಾತೈಲದ ಬೆಲೆ $60, ಪೆಟ್ರೋಲ್ 102 ರೂ, ಡಿಸೇಲ್ 90.99 ರೂ, ಗ್ಯಾಸ್ ದರ 855.50 ರೂ, ಚಿನ್ನದ ಬೆಲೆ 10 ಗ್ರಾಂಗೆ 96,610 ರೂ, ಆಗಿದೆ. ಇದಕ್ಕೆ ಕಾರಣ ಮತ್ತು ಜವಾಬ್ದಾರರು ಬಿಜೆಪಿಯವರು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ. ಹೀಗೆ ಬೆಲೆ ಏರಿಕೆಯಿಂದ ಜನಸಾಮಾನ್ಯರು ಮತ್ತು ಬಡವರ ರಕ್ತವನ್ನು ಹೀರುತಿವೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಚ್ಚಾತೈಲ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ತಗ್ಗಿದ್ದರೂ ಪೆಟ್ರೋಲ್, ಡಿಸೇಲ್ ದರ ಇಳಿಕೆ ಮಾಡುತ್ತಿಲ್ಲ. ಈ ಎಲ್ಲದರಿಂದಾಗಿ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಇದನ್ನೆಲ್ಲ ಮನಗಂಡು ರಾಜ್ಯ ಕಾಂಗ್ರೆಸ್ ಸರ್ಕಾರವು ₹52 ಸಾವಿರ ಕೋಟಿ ಮೀಸಲಿರಿಸಿ ಐದು ಗ್ಯಾರಂಟಿ ಯೋಜನೆಗೆ ನೀಡುತ್ತಿದ್ದೇವೆ ಎಂದರು.
ಬೆಲೆ ಏರಿಕೆಯ ಕುರಿತು ಪ್ರತಿ ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ಗ್ರಾಮೀಣ ಪ್ರದೇಶ ಮತ್ತು ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಖಚಿತ ಮಾಹಿತಿ ಕೊಡುವುದರ ಮೂಲಕ ಈ ಬೆಲೆ ಏರಿಕೆಯನ್ನು ತಗ್ಗಿಸಬೇಕು ಹಾಗೆಯೇ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೆರಬೇಕೆಂದು ಹೇಳಿದರು.
ಈ ಬೃಹತ್ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ರಣದೀಪ್ ಸಿಂಗ್ ಸುರ್ಜೇವಾಲ್, ಎಸಿಸಿ ಪ್ರಧಾನಿ ಕಾರ್ಯದರ್ಶಿಗಳು, ಲೋಕ ಮತ್ತು ರಾಜ್ಯಸಭೆಯ ಸದಸ್ಯರು, ಮಾಜಿ ಮಂತ್ರಿಗಳು, ಶಾಸಕರು ಮತ್ತು ಇತರೆ ಎಲ್ಲ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಕೇಂದ್ರ ಬಿಜೆಪಿ ಸರ್ಕಾರ ಮಾಡಿರುವ ಬೆಲೆ ಏರಿಕೆಗೆ ಪರಿಹಾರವೇ ನಮ್ಮ ಐದು ಗ್ಯಾರಂಟಿ ಯೋಜನೆಗಳು: ಸಿ.ಎಂ.ಸಿದ್ದರಾಮಯ್ಯ
