ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವು ಮುಸ್ಲಿಮರ ಮೇಲಿನ ದಾಳಿ ಮಾತ್ರವಲ್ಲ, ಭವಿಷ್ಯದಲ್ಲಿ ಇತರೆ ಸಮುದಾಯಗಳನ್ನು ಗುರಿಯಾಗಿಸುವ ಪೂರ್ವನಿದರ್ಶನವಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶಕೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್) ಈಗ ಕ್ಯಾಥೋಲಿಕ್ ಚರ್ಚ್ ಭೂಮಿಯತ್ತ ಗಮನ ಹರಿಸಿದೆ ಎಂಬ ವರದಿಯೊಂದನ್ನು ಹಂಚಿಕೊಂಡು ಕಿಡಿ ಕಾರಿದ್ದಾರೆ. ವಕ್ಫ್ ಮಸೂದೆ ಮುಸ್ಲಿಮರ ಮೇಲೆ ದಾಳಿ ಮಾಡುತ್ತದೆ ಎಂದು ಈ ಹಿಂದೆಯೇ ಹೇಳಿದ್ದೆ. ಇದೀಗ ಈ ಮಸೂದೆ ಅಂಗೀಕಾರವು ಇತರೆ ಸಮುದಾಯಗಳನ್ನು ಗುರಿಯಾಗಿಸುವ ಪೂರ್ವ ನಿರ್ದಶನವಾಗಿದೆ ಎಂದು ರಾಹುಲ್ ಹೇಳಿದ್ದಾರೆ.
ಇಂತಹ ದಾಳಿಗಳಿಂದ ಜನರನ್ನು ರಕ್ಷಿಸುವುದಕ್ಕೆ ಸಂವಿಧಾನದಿಂದ ಮಾತ್ರ ಸಾಧ್ಯ. ಆದ್ದರಿಂದ ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.