ಬೆಂಗಳೂರು ಸೇರಿದಂತೆ ದೇಶದ ಹಲವು ಕಡೆ SDPI ಕಚೇರಿಗಳ ಮೇಲೆ ಇ.ಡಿ ದಾಳಿ

Most read

ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಂಟು ಹೊಂದಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವಿರುದ್ದ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ 12 ಸ್ಥಳಗಳಿಗೂ ಹೆಚ್ಚಿನ ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಗುರುವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಝಿ ಅವರ ಬಂಧನದ ಬೆನ್ನಲ್ಲೇ ಇ.ಡಿ ದಾಳಿ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.

ದೆಹಲಿಯ ಎರಡು ಕಡೆಗಳಲ್ಲಿ ಹಾಗೂ ಕೇರಳದ ತಿರುವನಂತಪುರ ಮತ್ತು ಮಲಪ್ಪುರಂ, ಆಂಧ್ರಪ್ರದೇಶದ ನಂದ್ಯಾಲ್, ಜಾರ್ಖಂಡ್ನ ಪಾಕುರ್, ಮಹಾರಾಷ್ಟ್ರದ ಠಾಣೆ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಲಖನೌ ಮತ್ತು ಜೈಪುರದಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಿಎಫ್ಐ ಹಾಗೂ ಎಸ್ಡಿಪಿಐ ನಡುವೆ ಸಂಘಟನಾತ್ಮಕ ಸಂಬಂಧ ಇದೆ ಎಂದು ಇ.ಡಿ ಹೇಳಿದೆ. ತನ್ನ ರಾಜಕೀಯ ಪಕ್ಷ ಎಸ್ಡಿಪಿಐ ಮೂಲಕ ಪಿಎಫ್ಐ ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿಸಿಕೊಂಡಿತ್ತು ಎಂದು ಆರೋಪಿಸಿದೆ.

More articles

Latest article