ಸಂವಿಧಾನದ‌ ಮೌಲ್ಯಗಳನ್ನು ಬಿತ್ತರಿಸುವ ಸಿನಿಮಾಗಳು ತಯಾರಾಗಬೇಕು‌ : ಸಿಎಂ ಸಿದ್ದರಾಮಯ್ಯ

Most read

ಪ್ರೊಪೊಗಾಂಡ ಬಿತ್ತರಿಸುವ ಸಿನಿಮಾಗಳು ತೋರಿಸುವ ಕೆಲಸ ಚಲನಚಿತ್ರ ರಂಗ ಮಾಡಬಾರದು. ಬದುಕನ್ನು, ಸಮಾಜವನ್ನು, ಸಂವಿಧಾನದ ಮೌಲ್ಯಗಳನ್ನು ಪ್ರತಿಬಿಂಬಿಸುವ ಸಿನಿಮಾಗಳನ್ನು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಮಾಡಿ ಮಾತನಾಡಿದ ಅವರು, ‘ಇಂದು ನಮ್ಮಲ್ಲಿ ಪ್ರೀತಿ ಕಡಿಮೆ ಆಗಿ, ಅಸಂತೋಷ, ಅಸೂಯೆ ಹೆಚ್ಚಾಗಿದೆ. ಇದನ್ನು ಹೋಗಲಾಡಿಸಲು‌‌ ಜಾತಿ ರಹಿತವಾದ ಸಮಾಜ ನಿರ್ಮಾಣ ಆಗಬೇಕು. ಅಸಮಾನತೆ ಹೋಗಿ ಸಂವಿಧಾನದ ಮೌಲ್ಯಗಳು ಹೆಚ್ಚಾಗಬೇಕು’ ಎಂದರು.

ನಮಗೆ ಸ್ವಾತಂತ್ರ್ಯದ‌‌ ಫಲ ಸಿಗಬೇಕಾದ್ರೆ, ಪ್ರತಿಯೊಬ್ಬರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿರುವ ಮಾತನ್ನು ನೆನೆಪಿಸಿಕೊಂಡರು.

ಶೇ.1% ಜನರಲ್ಲಿ‌ ಶೇ 50% ರಷ್ಟು‌ ಸಂಪತ್ತು ಕೇಂದ್ರೀಕೃತವಾಗಿರುವ ಕಾರಣ‌, ಅಸಂತೋಷ, ಹಿಂಸೆ, ಅಸೂಹೆ ಸ್ವಾಭಾವಿಕವಾಗಿದೆ. ಇವೆಲ್ಲ ಕಡಿಮೆ ಮಾಡಲೆಂದೆ ನಾವು ಸಿನಿಮೋತ್ಸವಕ್ಕೆ “ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಥೀಮ್ ಇಟ್ಟಿರೋದು ಎಂದರು.

ಇಂದು ಡಿಜಿಟಲಿಕರಣ, ಆರ್ಟಿಫೀಶಿಯಲ್ ಇಂಟಲಿಜಿಯನ್ಸ್ ಹೆಚ್ಚಾಗಿದೆ. ಅದನ್ನು ಬಳಸಿಕೊಂಡು ಸಿನಿಮಾ ತಯಾರಿ ಆಗಬೇಕು. ಬೆಂಗಳೂರು ಒಂದು ಜಗತ್ತು. ‌ಬೆಳವಣಿಗೆಯ ತಂತ್ರಜ್ಞಾನವನ್ನು ಬಳಸಿಕೊಂಡು ಒಳ್ಳೆಯ ಚಿತ್ರಗಳು ಬರಲಿ. ಸಮಾಜದ ಒಳಿತಿನ ಬಗ್ಗೆ ಸಂದೇಶ ಸಾರುವ ಚಿತ್ರಗಳು ಬರಲಿ ಎಂದು ಸೂಚನೆ ಕೊಟ್ಟರು.

150 ಎಕ್ಕರೆಯಲ್ಲಿ‌ ಮೈಸೂರು ಹತ್ತಿರ ಫಿಲಂ ಸಿಟಿಯನ್ನು ನಿರ್ಮಾಣಮಾಡುತ್ತಿದ್ದೇವೆ. ಕರ್ನಾಟಕ ಸರ್ಕಾರವು ಚಿತ್ರರಂಗದ ಜೊತೆ ಯಾವಾಗಲೂ ಇರುತ್ತದೆ ಎಂದರು.

More articles

Latest article