ರಷ್ಯಾದ ಬಿಯರ್ ಕ್ಯಾನ್ ಮೇಲೆ ಮಹಾತ್ಮಾ ಗಾಂಧೀಜಿ ಹೆಸರು; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

Most read

ಬೆಂಗಳೂರು: ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದಷ್ಟೇ ಮಹತ್ವವನ್ನು ಮಹಾತ್ಮಾ ಗಾಂಧೀಜಿ ಮದ್ಯಪಾನ ನಿಷೇಧಕ್ಕೂ ನೀಡಿದ್ದರು. ಕುಡಿತದ ಕೆಡಕುಗಳನ್ನು ಕುರಿತು ದೇಶಾದ್ಯಂತ ಆಂದೋಲನವನ್ನೇ ನಡೆಸಿದ್ದರು. ಆದರೆ ರಷ್ಯಾದ ಬಿಯರ್ ಕಂಪನಿಯೊಂದು ಬಿಯರ್ ಕ್ಯಾನ್ ಮೇಲೆ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರವನ್ನು ಮುದ್ರಿಸಿದೆ. ರೆವರ್ಟ್ ಬ್ರಾಂಡ್ನ ಹೇಜಿ ಐಪಿಎ ಬಿಯರ್ ಕ್ಯಾನ್ಗಳಲ್ಲಿ ಗಾಂಧಿಯವರ ಫೋಟೋ ಮತ್ತು ಸಹಿಯನ್ನು ಮುದ್ರಿಸಿ ʼಮಹಾತ್ಮಾ ಜಿʼ ಎಂದು ಹೆಸರಿಟ್ಟಿದೆ. ಇದರಿಂದ ಭಾರತೀಯರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅಲ್ಲಿನ ಭಾರತೀಯರು ಬಿಯರ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು ಕೂಡಲೇ ಈ ಬಿಯರ್ ಕ್ಯಾನ್ ಗಳನ್ನು ಹಿಂಪಡೆಯಬೇಕು ಮತ್ತು ಮುದ್ರಣವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಸುಪರ್ಣೊ ಸತ್ಪದಿ ಎಂಬುವರು ಎಕ್ಸ್ ನಲ್ಲಿ ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ರಷ್ಯಾದ ಮುಖ್ಯಸ್ಥರೊಂದಿಗೆ ಮಾತನಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಹಿಂದೆ ಅಮೆರಿಕಾದ ಕಂಪೆನಿಯೊಂದು ಬಿಯರ್‌ ಬಾಟಲ್‌ಗಳ ಮೇಲೆ ಗಾಂಧೀಜಿ ಅವರ ಭಾವಚಿತ್ರವನ್ನು ಮುದ್ರಿಸಿತ್ತು. ಈ ಬಗ್ಗೆ ಹೈದರಾಬಾದ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ ನಂತರ ಅಮೆರಿಕದ ಕಂಪನಿ ತನ್ನ ಬಿಯರ್ ಉತ್ಪನ್ನಗಳಿಂದ ಗಾಂಧಿಯವರ ಚಿತ್ರವನ್ನು ತೆಗೆದುಹಾಕಿ ಕ್ಷಮೆಯಾಚಿಸಿತ್ತು.

More articles

Latest article