ರತನ್ ಟಾಟಾ ತಮ್ಮ ರೂ. 500 ಕೋಟಿ ಆಸ್ತಿಯನ್ನು ಹಂಚಿದ್ದು ಇವರಿಗೆ

Most read

ಬೆಂಗಳೂರು: ಖ್ಯಾತ ಉದ್ಯಮಿ ರತನ್ ಟಾಟಾ ಅವರು ಬರೆದಿಟ್ಟಿದ್ದ ಉಯಿಲು ಬಹಿರಂಗವಾಗಿದ್ದು ಅದರಲ್ಲಿ ನಿಗೂಢ ವ್ಯಕ್ತಿಯೊಬ್ಬರಿಗೆ ಸುಮಾರು ರೂ. 500 ಕೋಟಿಯ ಆಸ್ತಿಯನ್ನು ಬರೆದಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊಬಿದ್ದಿದೆ. ಟಾಟಾ ಅವರ ಉಯಿಲಿನ ಪ್ರಕಾರ ಜಾರ್ಖಂಡ್‌ನ ಜಮ್‌ಶೇಡ್‌ಪುರದ ಮೋಹಿನಿ ಮೋಹನ್ ದತ್ತಾ ಎಂಬುವವರಿಗೆ ರೂ. 500 ಕೋಟಿ ಆಸ್ತಿ ಸಿಗುತ್ತಿದೆ.

ಮೋಹಿನಿ ಮೋಹನ್ ದತ್ತಾ ರವರು ಟಾಟಾ ಗ್ರೂಪ್‌ನ ಕೆಲವೇ ಕೆಲವು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಮಾತ್ರ ತಿಳಿಸದಿದೆ ಎನ್ನಲಾಗಿದೆ. ರತನ್ ಟಾಟಾ ಅವರು ದತ್ತಾ ಅವರನ್ನು ಐದು ಆರು ದಶಕಗಳ ಹಿಂದೆಯೇ ಭೇಟಿಯಾಗಿದ್ದರು. ನಿಗೂಢ ಕಾರಣವೊಂದಕ್ಕೆ ರತನ್ ಅವರು ದತ್ತಾ ಅವರನ್ನು ಮೆಚ್ಚಿಕೊಂಡಿದ್ದರು. ಅವರ ಸಂಬಂಧ ಕೊನೆಯವರೆಗೂ ಉಳಿದುಕೊಂಡಿತ್ತು. ಹೀಗಾಗಿ ರತನ್ ಅವರು ತಮ್ಮ ಪಾಲಿನ ಆಸ್ತಿಯಲ್ಲಿ ಪ್ರೀತಿಯಿಂದಲೇ  ಅವರಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಮೋಹಿನಿ ಮೋಹನ್ ದತ್ತಾ ಅವರು ಟ್ರಾವೆಲ್ ಹಾಗೂ ಹೋಟೆಲ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಂಪನಿಯೊಂದನ್ನು ಆರಂಭಿಸಿದ್ದರು. ಅದು ಸದ್ಯ ಟಾಟಾ ಗ್ರೂಪ್ ಒಡೆತನದಲ್ಲಿದೆ. ಅವರ ಮಕ್ಕಳು ಟಾಟಾ ಗ್ರೂಪ್ ಅಡಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಬಗ್ಗೆ ಟಾಟಾ ಕಂಪನಿಯಲ್ಲಿ ಹಾಗೂ ಉದ್ಯಮ ವಲಯದಲ್ಲಿ ಬಹುತೇಕ ಮಂದಿಗೆ ತಿಳಿದಿಲ್ಲ. ಇದು ಅಚ್ಚರಿಯ ಸಂಗತಿಯೂ ಹೌದು.

ವೈಯಕ್ತಿಕವಾಗಿ ಸುಮಾರು ರೂ. 8 ಸಾವಿರ ಕೋಟಿಗೂ ಅಧಿಕ ಮೌಲ್ಯದ ಹಣ, ಆಸ್ತಿಯ ಒಡೆಯರಾಗಿರುವ ರತನ್ ಟಾಟಾ ಅವರು ಉಯಿಲಿನ ಮೂಲಕ ತಮ್ಮ ಎಲ್ಲ ಆಸ್ತಿಯನ್ನು ಹಂಚಿದ್ದಾರೆ. ಕಳೆದ ವರ್ಷ ಅಕ್ಟೋಬರ್ 24 ರಂದು ತಮ್ಮ 86 ನೇ ವಯಸ್ಸಿನಲ್ಲಿ ರತನ್ ಟಾಟಾ ಅವರು ನಿಧನರಾಗಿದ್ದರು.

More articles

Latest article