ಕೇಂದ್ರ ಬಜೆಟ್‌ ಮುಖ್ಯಾಂಶಗಳು; ಕ್ಯಾನ್ಸರ್, ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದ 30 ಔಷಧಗಳಿಗೆ ಆಮದು ಮೇಲಿನ ಅಬಕಾರಿ ಸಂಕದಿಂದ ರಿಯಾಯಿತಿ

Most read

ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಇದರಿಂದ ಕ್ಯಾನ್ಸರ್ ರೋಗಿಗಳಿಗೆ ಬೇರೆ ಬೇರೆ ಊರಿಗೆ ಅಲೆಯುವ ಅಗತ್ಯವಿರುವುದಿಲ್ಲ.

ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ
ಕ್ಯಾನ್ಸರ್, ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದ 30 ಔಷಧಗಳಿಗೆ ಆಮದು ಮೇಲಿನ ಅಬಕಾರಿ ಸಂಕದಿಂದ ರಿಯಾಯಿತಿ.

ಎಲ್ಲಾ ಸರ್ಕಾರಿ ಶಾಲೆಗಳಿಗೂ ಬ್ರಾಂಡ್ಬ್ಯಾಂಡ್ ಸಂಪರ್ಕ; ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ.

ವಿಮಾ ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ. ಸಾರ್ವಜನಿಕ ಬ್ಯಾಂಕ್ಗಳ ಮೂಲಕ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸೌಲಭ್ಯಗಳ ವಿಸ್ತರಣೆ
ಭಾರತ್ ಟ್ರೇಡ್ ನೆಟ್ವರ್ಕ್ ಮೂಲಕ ಹಣಕಾಸು ಕ್ಷೇತ್ರದಲ್ಲಿ ನೆರವು. ಜಾಗತಿಕ ಪೂರೈಕೆ ಸರಪಳಿಯಲ್ಲಿ ದೇಶಿ ಉತ್ಪನ್ನಗಳ ಮಾರಾಟದಲ್ಲಿ ತೊಡಗುವವರಿಗೆ ಈ ಯೋಜನೆ ಮೂಲಕ ಸಹಕಾರ.

ಹೋಂಸ್ಟೇಗಳಿಗೆ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ. ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 50ಸಾವಿರ ಪ್ರವಾಸಿ ತಾಣಗಳ ಅಭಿವೃದ್ಧಿ. ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಟೂರಿಸಂಗೆ ಒತ್ತು. ಟಾಪ್-50 ಪ್ರವಾಸಿ ತಾಣಗಳ ಅಬಿವೃದ್ಧಿ. ಬಿಹಾರದ ಬೌದ್ಧ ತಾಣಗಳು ಅಭಿವೃದ್ಧಿ.

ಬೆಂಗಳೂರಿನ IIScಗೆ ಆರ್ಥಿಕ ನೆರವು. IIT.IISc ಗಳಿಗೆ 10 ಸಾವಿರ ಫೆಲೋಶಿಪ್. ತಾಂತ್ರಿಕ ಸಂಶೋಧನೆಯಲ್ಲಿ ತೊಡಗಿರುವ 10 ಸಾವಿರ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್. ಜ್ಞಾನ ಭಾರತ ಮಿಷನ್ ಮೂಲಕ ಐತಿಹಾಸಿಕ ಸಾಕ್ಷ್ಯಗಳ ಸಂಗ್ರಹ. ಖಾಸಗಿ ಕ್ಷೇತ್ರದ ಸಂಶೋಧನೆ & ಅಭಿವೃದ್ಧಿಗೆ 20 ಸಾವಿರ ಕೋಟಿ. ಗ್ಯಾನ್ ಭಾರತ್ ಯೋಜನೆ ಘೋಷಣೆ.

ಜಲ್ ಜೀವನ್ ಮಿಷನ್ ಅನ್ನು 2028 ರವರೆಗೆ ವಿಸ್ತರಣೆ. ಈ ಮೂಲಕ ಶೇ.100 ರಷ್ಟು ಗ್ರಾಮೀಣ ಭಾಗದ ಜನತೆಗೆ ರಕ್ಷಣೆ. 2019 ರಿಂದ ಇಲ್ಲಿಯವರೆಗೆ, ಗ್ರಾಮೀಣ ಜನಸಂಖ್ಯೆಯ ಶೇಕಡಾ 80 ರಷ್ಟು ವ್ಯಾಪ್ತಿಗೆ ಒಳಪಟ್ಟಿದೆ.

ಯುವಜನರ ಮನಸ್ಸಿನಲ್ಲಿ ವೈಜ್ಞಾನಿಕ ಚಿಂತನೆಯನ್ನು ಬೆಳೆಸಲು ಮುಂದಿನ 5 ವರ್ಷಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಸ್ಥಾಪನೆ.

ಪರಮಾಣು ಶಕ್ತಿ ಅಭಿವೃದ್ಧಿಗೆ ಖಾಸಗಿ ವಲಯದೊಂದಿಗೆ ಸಹಕಾರ; ಚರ್ಮ ಕೈಗಾರಿಕೆ ಯೋಜನೆಯಡಿ 22 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿ

More articles

Latest article