ಕೇಂದ್ರ ಬಜೆಟ್‌ ಮುಖ್ಯಾಂಶಗಳು; 50 ಪ್ರವಾಸಿ ತಾಣಗಳ ಉತ್ತೇಜನ

Most read

ಜಲ ಜೀವನ್ ಯೋಜನೆ 2028ರವರೆಗೆ ವಿಸ್ತರಣೆ. ಗ್ರಾಮೀಣ ಭಾಗದಲ್ಲಿ ಶೇ.100ರಷ್ಟು ಕುಡಿಯುವ ನೀರು ಪೂರೈಕೆ ಗುರಿ. ಶೇ.80ರಷ್ಟು ಗ್ರಾಮೀಣ ಭಾಗ ಹೊಂದಿರುವ ಭಾರತ. ಗ್ರಾಮೀಣ ಭಾಗದಲ್ಲಿ ನಲ್ಲಿ ನೀರು ಯೋಜನೆ.
ನಗರಾಭಿವೃದ್ಧಿಗೆ 1ಲಕ್ಷ ಕೋಟಿ ರೂ. ವಿಶೇಷ ಅನುದಾನ. ವಿಕಸಿತ ಭಾರತಕ್ಕೆ ನ್ಯೂಕ್ಲಿಯರ್ ಎನರ್ಜಿ ಮಿಷನ್. 2047ರ ವೇಳೆಗೆ ಅಣು ವಿದ್ಯುತ್ ಉತ್ಪಾದನೆ ಹೆಚ್ಚಳ. ನಗರ ಪ್ರದೇಶಗಳಲ್ಲಿ ಮೂಲಸೌಕರ್ಯ ಹೆಚ್ಚಳ. 2 ವರ್ಷಗಳಲ್ಲಿ 100 ಗಿಗಾ ವ್ಯಾಟ್ ಅಣು ವಿದ್ಯುತ್ ಉತ್ಪಾದನೆ ಗುರಿ. ಸಣ್ಣ ರಿಯಾಕ್ಟರ್ ಸಂಶೋಧನೆಗೆ 20 ಸಾವಿರ ಕೋಟಿ ಅನುದಾನ.

ರಾಜ್ಯ ಸರ್ಕಾರದ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹಧನ. ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ 1 ಲಕ್ಷ ಕೋಟಿ ಮೀಸಲು. ರಾಜ್ಯಗಳ ಮೂಲಭುತ ಸೌಕರ್ಯಕ್ಕೆ ಪ್ರತಿ ರಾಜ್ಯಕ್ಕೆ 1.50 ಲಕ್ಷ ಕೋಟಿ ಅನುದಾನ. ಹಡಗುಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ. 2033ಕ್ಕೆ ಮೇಡ್ ಇನ್ ಇಂಡಿಯಾ ರಿಯಾಕ್ಟರ್ ಹೊಂದುವ ಗುರಿ.

220 ಹೊಸ ಊರುಗಳಿಗೆ ಉಡಾನ್ ವಿಮಾನಯಾನ ಸೌಲಭ್ಯ. 10 ವರ್ಷಗಳಲ್ಲಿ 4 ಕೋಟಿ ಪ್ರಯಾಣಿಕರನ್ನು ಹೆಚ್ಚಿಸುವ ಗುರಿ. ಉಡಾನ್ ಯೋಜನೆಯಿಂದ 1.5 ಕೋಟಿ ಮಧ್ಯಮ ವರ್ಗಗಳಿಗೆ ಅನುಕೂಲ. ಬಿಹಾರ್ ದಲ್ಲಿ ಗ್ರೀನ್ ಫೀಲ್ಡ್ ಏರ್ ಪೋರ್ಟ್ ನಿರ್ಮಾಣ.

ಬಿಹಾರದ ಪಶ್ಚಿಮ ಕೋಸಿ ಯೋಜನೆಗೆ ಅನುದಾನ. ಗಣಿ ವಲಯದಲ್ಲಿ ಹಲವು ಬದಲಾವಣೆ. ಹಡಗು ನಿರ್ಮಾಣ ಘಟಕಗಳ ಅಭಿವೃದ್ದಿ. ಮಿಥಿಲಾಂಚದಲ್ಲಿ ಕೋಶಿ ಕಾಲುವೆ ನಿರ್ಮಾಣ ಯೋಜನೆ ಘೋಷಣೆ. 50 ಪ್ರವಾಸಿ ಕೇಂದ್ರಗಳ ಅಭಿವೃದ್ದಿಗೆ ಯೋಜನೆ. ಖಾಸಗಿ ವಲಯಕ್ಕೆ ಪಿಎಂ ಗತಿಶಕ್ತಿ ಯೋಜನೆ.
ಭಾರತ್ ಟ್ರೇಡ್ ನೆಟ್ವರ್ಕ್ ಮೂಲಕ ಹಣಕಾಸು ಕ್ಷೇತ್ರದಲ್ಲಿ ನೆರವು. ಜಾಗತಿಕ ಪೂರೈಕೆ ಸರಪಳಿಯಲ್ಲಿ ದೇಶಿ ಉತ್ಪನ್ನಗಳ ಮಾರಾಟದಲ್ಲಿ ತೊಡಗುವವರಿಗೆ ಈ ಯೋಜನೆ ಮೂಲಕ ಸಹಕಾರ.

ಜೀನ್ ಬ್ಯಾಂಕ್ ಸ್ಥಾಪನೆಗೆ ಒತ್ತು. ಆ ಮೂಲಕ ಅನುವಂಶೀಯ ಕಾಯಿಲೆಗಳ ಸಂಶೋಧನೆ ಸಾಧ್ಯ. ಐಐಟಿ, ಐಐಎಸ್ಸಿಯಲ್ಲಿ ಹೆಚ್ಚುವರಿ ಸಂಶೋಧನೆಗೆ ಅನುದಾನ. ಭಾರತೀಯ ಜ್ಞಾನ ಸಂಪತ್ತಿನ ಬ್ಯಾಂಕ್ ಸ್ಥಾಪನೆಗೆ ಕ್ರಮ.

ಪ್ರವಾಸೋಧ್ಯಮಕ್ಕೆ ಒತ್ತು– ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ 50 ಪ್ರವಾಸಿ ತಾಣಗಳ ಉತ್ತೇಜನ. ಹೋಟೆಲ್ ನಿರ್ಮಾಣ ಹಾಗೂ ಇತರ ಮೂಲಸೌಕರ್ಯಕ್ಕೆ ಒತ್ತು; ಮುದ್ರಾ ಯೋಜನೆ ಮೂಲಕವೂ ಪ್ರವಾಸಿ ತಾಣಗಳ ಅಭಿವೃದ್ಧಿ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಖಾಸಗಿ ಪಾಲುದಾರಿಕೆ.

More articles

Latest article