ಬೆಂಗಳೂರಿನಲ್ಲಿ ಜನವರಿ 30 ರಂದು  ಮಾಂಸ ಮಾರಾಟಕ್ಕೆ ನಿಷೇಧ

Most read

ಬೆಂಗಳೂರು:  ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ ಜನವರಿ 30 ರಂದು ಸರ್ವೋದಯ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಹಾತ್ಮಾ ಗಾಂಧಿ ಅವರನ್ನು ಜನವರಿ 30, 1948 ರಲ್ಲಿ ನಾಥೂರಾಂ ಗೂಡ್ಸೆ ಹತ್ಯೆ ಮಾಡಿದ್ದ. ಅವರ ಪುಣ್ಯತಿಥಿಯ 77ನೇ ವರ್ಷಾಚರಣೆಯನ್ನು ಜನವರಿ 30ರಂದು ಆಚರಿಸಲಾಗುತ್ತದೆ.

More articles

Latest article