ಬೆಂಗಳೂರು: ಭಾರತ ಸಂವಿಧಾನಕ್ಕೆ 75 ವರ್ಷಗಳ ಸಂಭ್ರಮ. ಈ ಸಂಭ್ರಮವನ್ನು ಹಂಚಿಕೊಳ್ಳಲು ಕನ್ನಡದ ಪ್ರಮುಖ ವೆಬ್ ಚಾನೆಲ್ ಕನ್ನಡ ಪ್ಲಾನೆಟ್ ಸಮ್ಮಿಳನ-2025 ಭಾರತ ಸಂವಿಧಾನ ಸಂಭ್ರಮ- 75 ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂವಿಧಾನ ಸಂಭ್ರಮದ ಅಂಗವಾಗಿ KANNADA PLANET CONCLAVE-2025 ಕಾರ್ಯಕ್ರಮ ದಿನವಿಡೀ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅಂಬೇಡ್ಕರೈಟ್ ಯೂತ್ ಫೆಡರೇಷನ್ ಸಹಯೋಗ ನೀಡಿದೆ.
ನಾಳೆ ಜನವರಿ 11ರಂದು ಗಾಂಧಿ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ನೆರವೇರಲಿದೆ. ನಾಡೋಜ ಸಾಹಿತಿ, ಪ್ರೊ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಕನ್ನಡ ಪ್ಲಾನೆಟ್ ಪ್ರಧಾನ ಸಂಪಾದಕ ಹರ್ಷಕುಮಾರ್ ಕುಗ್ವೆ ಅವರು ರಚಿಸಿರುವ ನಮ್ಮ ಸಂವಿಧಾನ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಡಾ.ಯತೀಂದ್ರ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಸುಧಾಮ ದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅಧ್ಯಕ್ಷತೆ ವಹಿಸಲಿದ್ದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಆಶಯ ನುಡಿಗಳನ್ನಾಡಲಿದ್ದಾರೆ.
ನಂತರ 12.15ಕ್ಕೆ ಸಂವಿಧಾನ- ಅಂಬೇಡ್ಕರ್ ಯುವಜನತೆ ಕುರಿತ ಗೋಷ್ಠಿ ನಡೆಯಲಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಷಯ ಕುರಿತು ಮಾತನಾಡಲಿದ್ದಾರೆ. 1 ಗಂಟೆಗೆ ಸಂವಿಧಾನ –ಬಹುತ್ವ-ಒಕ್ಕೂಟ ವ್ಯವಸ್ಥೆ ಕುರಿತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಲಿದ್ದಾರೆ. ಮಧ್ಯಾಹ್ನ 2.15ಕ್ಕೆ ಇಸ್ಲಾಮೋಫೋಬಿಯಾ ಮತ್ತು ಸಧ್ಯದ ರಾಜಕಾರಣ ಕುರಿತು ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಮುಖ್ಯ ಬಾಷಣ ಮಾಡಲಿದ್ದಾರೆ. 3 ಗಂಟೆಗೆ ದಾರಿ ತಪ್ಪಿದ ಮಾಧ್ಯಮಗಳು, ಪರಿಹಾರವೇನು? ವಿಷಯ ಕುರಿತು ವಿಜಯ ಟೈಮ್ಸ್ ಮುಖ್ಯಸ್ಥೆ ವಿಜಯಲಕ್ಷ್ಮಿ ಶಿಬರೂರು ಮಾತನಾಡಲಿದ್ದಾರೆ.
4 ಗಂಟೆಗೆ ಭಾರತ ವಿರೋಧಿ, ಸಂವಿಧಾನ ವಿರೋಧಿಗಳಿಗೆ ನಮ್ಮ ಉತ್ತರವೇನು? ವಿಷಯ ಕುರಿತು ಕರ್ನಾಟಕ ಜನಶಕ್ತಿ ಮುಖಂಡ ನೂರ್ ಶ್ರೀಧರ್ ಮಾತನಾಡಲಿದ್ದಾರೆ. ಸಂಜೆ 5 ಗಂಟೆಗೆ ಸಮಾರೋಪ ಮತ್ತು ಸಂವಿಧಾನ ಸಂಭ್ರಮ ಕುರಿತ ವಿಡಿಯೋ ಭಾಷಣ ಕುರಿತ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಸಮಾರೋಪ ಭಾ಼ಷಣ ಮಾಡಲಿದ್ದಾರೆ. ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ವೆಂಕಟೇಶಯ್ಯ ನೆಲ್ಲಕುಂಟೆ, ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ ಸಂಘಟನೆಯ ಮುಖ್ಯಸ್ಥೆ ವೈಶಾಲಿ ಎನ್ .ಬ್ಯಾಳಿ ಉಪಸ್ಥಿತರಿರುತ್ತಾರೆ.