ಸಾಮಾಜಿಕ ಹೋರಾಟಗಾರ ಚಮರಂ ಅವರಿಗೆ “ರಾಜ್ಯ ಅಂಬೇಡ್ಕರೈಟ್ ಅವಾರ್ಡ್”

Most read

ಕಳೆದ 25 ವರ್ಷಗಳಿಂದಲೂ ಸಾಮಾಜಿಕ ಹೋರಾಟದಲ್ಲಿ ನಿರತರಾಗಿರುವ ಚಿಂತಕ ಡಾ. ಕೃಷ್ಣಮೂರ್ತಿ ಚಮರಂ ಅವರಿಗೆ ಸ್ಟೇಟ್ ಯೂತ್ ಅಂಬೇಡ್ಕರ್ ಫೆಡರೇಷನ್, ಬೆಂಗಳೂರು 24 ಮತ್ತು 25ನೇ ಸಾಲಿನ ಪ್ರಶಸ್ತಿ ಪುರಸ್ಕಾರಕ್ಕೆ ಹಲವು ಕ್ಷೇತ್ರದ ಗಣ್ಯರನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಡಾಕ್ಟರ್ ಕೃಷ್ಣಮೂರ್ತಿ ಚಮರಂ ಅವರಿಗೆ ಸಾಮಾಜಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಚಮರಂ ಸಾಹಿತಿಯಾಗಿ, ಸಾಮಾಜಿಕ ಚಿಂತಕರಾಗಿ ಚಲನಚಿತ್ರ ನಿರ್ದೇಶಕರಾಗಿ ಹಾಗೂ ಸಾಮಾಜಿಕ ಹೋರಾಟಗಾರರಾಗಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಇವರ ಈ ನಿರಂತರ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಡಾ. ಸುರೇಶ ಗೌತಮ್ ರುದ್ರ ಪುನೀತ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೇ ಡಿಸೆಂಬರ್ 25ರಂದು ಬೆಂಗಳೂರಿನ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಚಿವ ಸಂತೋಷ್ ಲಾಡ್, ಖ್ಯಾತ ಚಲನಚಿತ್ರ ನಟ ಅಶೋಕ್ ಹಾಗೂ ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕ ಪ ರಂಜಿತ್ ಅವರು ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಂಬೇಡ್ಕರ್ ಯೂಥ್ ಫೆಡರೇಶನ್ ನ ಈ ಕಾರ್ಯಕ್ರಮದಲ್ಲಿ ಹಲವು ವಿಚಾರಗೋಷ್ಠಿಗಳಿದ್ದು ನಾಡಿನ ಅನೇಕ ಚಿಂತಕರು ವಿವಿಧ ವಿಷಯಗಳ ಮೇಲೆ ಮಾತನಾಡಲಿದ್ದಾರೆ ಎಂದು ಫೆಡರೇಶನ್ನಿನ ಸುರೇಶ್ ಗೌತಮ್ ತಿಳಿಸಿದರು.

More articles

Latest article