ಮುಂಬೈ: ಮುಂಬೈ ನಗರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಹೇಳಿದ ಕರ್ನಾಟಕ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಶಿವಸೇನಾ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಕಿಡಿ ಕಾರಿದ್ದಾರೆ. ಮುಂಬೈ ಮಹಾನಗರವನ್ನು ಮಹಾರಾಷ್ಟ್ರದಿಂದ ಬೇರ್ಪಡಿಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮುಂಬೈ ನಗರವನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎನ್ನುವ ಬೇಡಿಕೆಯೇ ಮೂರ್ಖತನದಿಂದ ಕೂಡಿದೆ. ಕಾಂಗ್ರೆಸ್ , ಬಿಜೆಪಿ ಯಾವುದೇ ಪಕ್ಷವಾಗಿರಲಿ, ಮುಂಬೈ ನಗರವನ್ನು ಮಹಾರಾಷ್ಟ್ರದಿಂದ ಬೇರ್ಪಡಿಸುವ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ಮುಂಬೈ ನಮ್ಮ ಜನ್ಮಭೂಮಿ. ಮರಾಠರು ಅದನ್ನು ರಕ್ತ ಬಸಿದು ಕಟ್ಟಿದ್ದಾರೆಯೇ ಹೊರತು ನಮಗೆ ಯಾರೊಬ್ಬರೂ ಕೊಟ್ಟಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಲಕ್ಷ್ಮಣ ಸವದಿ ಅವರು ಮಹಾರಾಷ್ಟ್ರ ನಾಯಕರು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಹೇಳೀದ್ದಾರೆ. ಹಾಗಾದರೆ ಮುಂಬೈ ನಗರವನ್ನೂ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಿ ಎಂದು ಇತ್ತೀಚೆಗೆ ವಿಧಾನಸಭೆಯಲ್ಲಿ ಹೇಳಿದ್ದರು.