ಶಿವಣ್ಣ ನಿಮ್ಮೊಂದಿಗೆ ಇಡೀ ಕರ್ನಾಟಕವಿದೆ : ಕರವೇ ನಾರಾಯಣ ಗೌಡ್ರು

ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳುತ್ತಿರುವ ನಟ ಶಿವರಾಜ್‌ಕುಮಾರ್‌ ಅವರು ಆದಷ್ಟು ಬೇಗ ಗುಣಮುಖರಾಗಿ ನಗುನಗುತ್ತ ಬರಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡರು ಹೇಳಿದ್ದಾರೆ.

“ಕನ್ನಡ ಚಿತ್ರರಂಗದ ಮೇರು ಪ್ರತಿಭೆಗಳಲ್ಲಿ ಒಬ್ಬರಾದ ಶಿವರಾಜ್ ಕುಮಾರ್ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದಾರೆ. ನಿಶ್ಚಿತವಾಗಿಯೂ ಅವರಿಗೆ ಇರುವ ಅನಾರೋಗ್ಯ ಆದಷ್ಟು ಬೇಗನೇ ದೂರವಾಗಿ ನಗುನಗುತ್ತ ಬರುತ್ತಾರೆ. ಅವರ ಆಗಮನಕ್ಕಾಗಿ ಕರ್ನಾಟಕದ ಜನತೆ ಪ್ರೀತಿ, ಕಾಳಜಿಯಿಂದ ಕಾಯುತ್ತದೆ” ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ʼಶಿವಣ್ಣ ಕನ್ನಡದ ಅತ್ಯುತ್ತಮ ನಟ ಮಾತ್ರವಲ್ಲ, ಮಾನವೀಯ ಗುಣಗಳು ತುಂಬಿರುವ ಬಂಗಾರದ ಮನಸಿನ ಅಪ್ಪಟ ಮನುಷ್ಯ. ಎಷ್ಟು ಎತ್ತರಕ್ಕೆ ಏರಿದರೂ ಕೀರ್ತಿಶನಿಯನ್ನು ಹೆಗಲಿಗೇರಿಸಿಕೊಳ್ಳದೆ ವಿನಯವನ್ನೇ ಮೈಗೂಡಿಸಿಕೊಂಡ ಅಪರೂಪದ ಜೀವ. ಅವರಿಗೆ ಬಂದಿರುವ ಅನಾರೋಗ್ಯದ ಸಂಕಟ ತಾತ್ಕಾಲಿಕವಷ್ಟೆ. ಅವರು ಮರಳಿ ಬಂದು ಇನ್ನೂ ನೂರಾರು ಸಿನಿಮಾಗಳನ್ನು ಮಾಡುತ್ತಾರೆಂಬ ನಂಬುಗೆ ನನ್ನದುʼ ಎಂದರು.

ʼಶಿವಣ್ಣ, ನಿಮ್ಮೊಂದಿಗೆ ಇಡೀ ಕರ್ನಾಟಕದ ಜನತೆ ಇದೆ, ಇಡೀ‌ ಸಿನಿಮಾ ಸಮೂಹವಿದೆ. ಧೈರ್ಯದಿಂದ ಚಿಕಿತ್ಸೆ ಮುಗಿಸಿಕೊಂಡು ನಗುನಗುತ್ತ ಬೇಗ ಬಂದುಬಿಡಿ. ನಿಮಗಾಗಿ ಕಾಯುತ್ತಿರುತ್ತೇವೆʼ ಎಂದು ಹೇಳಿದರು.

More articles

Latest article

Most read