ಬೆಳಗಾವಿ: ಸದಾ ಮುಸಲ್ಮಾನರ ವಿರುದ್ಧ ಕಿಡಿ ಕಾರುತ್ತಲೇ ಇರುವ ಬಿಜೆಪಿ ಶಾಸಕ, ಪ್ರಖರ ಹಿಂದುತ್ವವಾದಿ ಬಸನಗೌಡ ಪಾಟೀಲ್ ಜಮೀರ್ ಇಂದು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಭೇಟಿ ಮಾಡಿರುವ ಫೊಟೋಗಳು ತೀವ್ರ ಚರ್ಚೆಗೆ ನಾಂದಿ ಹಾಡಿವೆ. ಬೆಳಗಾವಿಯ ಸುವರ್ಣಸೌಧದಲ್ಲಿ ಸಚಿವ ಜಮೀರ್ ಅವರ ಕೊಠಡಿಗೆ ತೆರಳಿ ಯತ್ನಾಳ ಕೆಲ ಹೊತ್ತು ಚರ್ಚೆ ನಡೆಸಿ ಮರಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಯತ್ನಾಳ್, ಸಚಿವ ಜಮೀರ್ ಅವರನ್ನು ಭೇಟಿಯಾದದ್ದು ಕೇವಲ ಕ್ಷೇತ್ರದ ಅಭಿವೃದ್ಧಿಯ ವಿಚಾರಗಳಿಗೆ ಸಂಬಂಧಿಸಿದಂತೆ ಹೊರತು ಯಾವುದೇ ಚರ್ಚೆಗಲ್ಲ. ವಿಜಯಪುರ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಜನರ ಆಶೋತ್ತರವನ್ನು ಈಡೇರಿಸಲು ನಾನು ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ವಕ್ಫ್ ನೋಟಿಸ್ ಕುರಿತು ಮೊದಲು ಧ್ವನಿ ಎತ್ತಿದ್ದೇ ಯತ್ನಾಳ ಅವರು. ಇಡೀ ರಾಜ್ಯಾದ್ಯಂತ ಅವರು ಇದೇ ವಿಷಯವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಮೀರ್ ಅಹಮದ್ ಖಾನ್ ವಿರುದ್ಧ ಆಕ್ರೋಶ ಹೊರ ಹಾಕುತ್ತಲೇ ಬಂದಿದ್ದರು.