ಮಂಗಳೂರು: ತಮ್ಮ ಮಹತ್ವಾಕಾಂಕ್ಷೆಯ “ಯುಐ” ಸಿನಿಮಾ ಯಶಸ್ಸಿಗೆ ರಿಯಲ್ ಸ್ಟಾರ್ ಉಪೇಂದ್ರ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಬಂಟ್ವಾಳದ ಮೊಡಂಕಾಪು ಎಂಬಲ್ಲಿ ಇರುವ ವನದುರ್ಗಾ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ್ದರು. ತಮ್ಮ ಹೊಸ ಸಿನಿಮಾ ಯುಐ ಯಶಸ್ವಿಯಾಗಲಿ ಎಂದು ದೇವರಿಗೆ ಮೊರೆ ಹೋದರು. ಈಚಿತ್ರವನ್ನು ಉಪ್ಪಿ ಸ್ವತಃ ನಿರ್ದೇಶಿಸಿ ನಟಿಸುತ್ತಿದ್ದಾರೆ.
ʼಯುಐ’ಸಿನಿಮಾ ಕುರಿತು ಭಾರೀ ನಿರೀಕ್ಷೆಗಳಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಚಲನಚಿತ್ರ ನಿರ್ಮಾಪಕ ಶ್ರೀಕಾಂತ್, ಸಂಗೀತ ನಿರ್ದೇಶಕ ವೇಲುಹರಿ ನವೀನ್ ಮನೋಹರ್ ಉಪೇಂದ್ರ ಜೊತೆಗಿದ್ದರು.