ಅದಾನಿ ಲಂಚ ಪ್ರಕರಣ ತನಿಖೆಗೆ ಕೋಲಾಹಲ; ಸಂಸತ್ ಕಲಾಪ ಮುಂದೂಡಿಕೆ

Most read

ನವದೆಹಲಿ: ಉದ್ಯಮಿ ಗೌತಮ್ ಅದಾನಿ ಲಂಚ ಹಗರಣ, ಮಣಿಪುರ ಹಾಗೂ ಸಂಭಲ್ ಹಿಂಸಾಚಾರ ಪ್ರಕರಣಗಳನ್ನು ಕೂಡಲೇ ಚರ್ಚೆಗೆ ಕೈಗೆತ್ತಿಕೊಳ್ಳಬೇಕೆಂದು ‘ಇಂಡಿಯಾ’ ಮೈತ್ರಿಕೂಟದ ಸಂಸದರು ಪಟ್ಟು ಹಿಡಿದ ಕಾರಣ ಸಂಸತ್ತಿನ ಉಭಯ ಕಲಾಪಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಲೋಕಸಭೆ ಕಲಾಪವನ್ನು ನಾಳೆ (ಮಂಗಳವಾರ) ಬೆಳಿಗ್ಗೆ 11 ಗಂಟೆವರೆಗೆ ಮುಂದೂಡಲಾಗಿದೆ. ಇತ್ತ ರಾಜ್ಯಸಭೆ ಕಲಾಪಕ್ಕೂ ಅಡ್ಡಿ ಉಂಟಾಗಿದ್ದರಿಂದ ಕಲಪವನ್ನು ನಾಳೆ ಬೆಳಿಗ್ಗೆ 12 ಗಂಟೆವರೆಗೆ ಮುಂದೂಡಲಾಗಿದೆ.

ಸಂಭಲ್ ಹಿಂಸಾಚಾರ ಮತ್ತು ಅಶ್ಮೀರ್ ದರ್ಗಾ ಕುರಿತಾದ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ ಘರ್ಹಿ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯಸಭೆ ಸಭಾಪತಿಗಳು ತಿರಸ್ಕರಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಚಿನ್ಮಯಿ ಕೃಷ್ಣದಾಸ್ ಸೇರಿದಂತೆ ಮೂವರು ಇಸ್ಕಾನ್ ಸನ್ಯಾಸಿಗಳ ಬಂಧನದ ಬಗ್ಗೆ ಚರ್ಚೆ ಮಾಡಲು ಆಪ್ ನ ರಾಘವ್ ಛಡ್ಡಾ ಮನವಿ ಸಲ್ಲಿಸಿದ್ದರು.

More articles

Latest article