ವಿಜಯೇಂದ್ರ ವಿರುದ್ಧ ಹೋರಾಟ; ಯತ್ನಾಳ್‌ ಗೆ ಕೊನೆಗೂ ನೋಟಿಸ್‌ ನೀಡಿದ ಹೈಕಮಾಂಡ್;‌ 10 ದಿನಗಳಲ್ಲಿ ಉತ್ತರಿಸಲು ಸೂಚನೆ

Most read

ಬೆಂಗಳೂರು: ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಬಹಿರಂಗವಾಗಿ ಹೋರಾಟ ನಡೆಸುತ್ತಿರುವ ಹಿರಿಯ ಮುಖಂಡ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರಿಗೆ ಬಿಜೆಪಿ ನೋಟಿಸ್‌ ನೀಡಿದೆ. ಪಕ್ಷದ ವರಿಷ್ಠರಾದ ಬಿ ಎಸ್‌ ಯಡಿಯೂರಪ್ಪ ಮತ್ತು ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿಯೇ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿರುವುದಕ್ಕೆ ನೋಟಿಸ್‌ ಜಾರಿಗೊಳಿಸಲಾಗಿದ್ದು, 10 ದಿನಗಳಲ್ಲಿ ಉತ್ತರ ನೀಡುವಂತೆ ಪಕ್ಷದ ಶಿಸ್ತು ಸಮಿತಿ ಸೂಚಿಸಿದೆ.

ವಿಜಯೇಂದ್ರ ಅಧ್ಯಕ್ಷರಾದ ದಿನದಿಂದಲೂ ಯತ್ನಾಳ್‌ ಅವರ ವಿರುದ್ಧ ಸಮರ ಸಾರಿದ್ದಾರೆ. ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ವಿಜಯೇಂದ್ರ ದೆಹಲಿಗೆ ತೆರಳಿ ಯತ್ನಾಳ್‌ ವಿರುದ್ಧ ದೂರು ಸಲ್ಲಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು. ಪಕ್ಷದ ನಿಯಮಗಳನ್ನು ನೀವು ಉಲ್ಲಂಘಿಸುತ್ತಿದ್ದೀರಿ. ಪಕ್ಷದ ರಾಜ್ಯ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದೀರಿ. ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ನಿಮ್ಮ ವರ್ತನೆಯನ್ನು ಸರಿಪಡಿಸಿಕೊಂಡಿಲ್ಲ. ನೀವು ನೀಡುತ್ತಿರುವ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ಗಮನಿಸಲಾಗಿದೆ ಮತ್ತು ವರಿಷ್ಠರ ಗಮನಕ್ಕೂ ಬಂದಿದೆ ಎಂದು ಶಿಸ್ತು ಸಮಿತಿ ಸದಸ್ಯ ಓಂ ಪಾಠಕ್‌ ನೋಟಿಸ್‌ ನಲ್ಲಿ ವಿವರಿಸಿದ್ದಾರೆ. ಯತ್ನಾಳ್‌ ಅವರೂ ಇಂದು ದೆಹಲಿಯಲ್ಲೇ ಇದ್ದಾರೆ. ರಾಜ್ಯ ಘಟಕದ ಬೆಳವಣಿಗೆಗಳನ್ನು ಕುರಿತು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ಧೇನೆ. ಹಿಂದುತ್ವ, ಭ್ರಷ್ಟಾಚಾರ ವಿರೋಧ, ವಕ್ಫ್‌ ವಿರುದ್ಧ ಹೋರಾಟ ಮತ್ತು ವಂಶಪಾರಂಪರ್ಯ ಹೋರಾಟಕ್ಕೆ ಬದ್ಧವಾಗಿದ್ಧೆನೆ ಎಂದು ಎಕ್ಸ್‌ ನಲ್ಲಿ ತಿಳಿಸಿದ್ದಾರೆ.
ಭಾನುವಾರ ಯಡಿಯೂರಪ್ಪ ಅವರ ನಿವಾಸದಲ್ಲಿ ಸಭೆ ನಡೆಸಿದ್ದ ಪಕ್ಷದ ಮುಖಂಡರು ಯತ್ನಾಳ್‌ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಪಡಿಸಿದ್ದರು.

ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಶಿಸ್ತು ಸಮಿತಿ ನೋಟಿಸ್‌ ಬೆನ್ನಲ್ಲೇ ಸಾಕಷ್ಟು ರಾಜಕೀಯ ಬೆಳವಣಿಗೆಗಳು ಬಿಜೆಪಿ ಪಾಳಯದಲ್ಲಿ ನಡೆಯುತ್ತಿದ್ದು, ಮುಂದೇನು? ಎಂಬ ಪ್ರಶ್ನೆಯೂ ಉದ್ಭವಿಸುತ್ತಿದೆ.TIMES OF INDIA: ಸದ್ಯ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೀಡಿರುವ ನೋಟಿಸ್‌ಗೆ ಉತ್ತರ ನೀಡುವುದಾಗಿ ಯತ್ನಾಳ್ ಹೇಳಿದ್ದಾರೆ. ಈ ನಡುವೆ ಯತ್ನಾಳ್ ಟೀಂ ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ವಿಜಯೇಂದ್ರ ವಿರುದ್ಧ ದೂರು ನೀಡಲಿದ್ದಾರೆ.TIMES OF INDIA: ಸದ್ಯ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೀಡಿರುವ ನೋಟಿಸ್‌ಗೆ ಉತ್ತರ ನೀಡುವುದಾಗಿ ಯತ್ನಾಳ್ ಹೇಳಿದ್ದಾರೆ. ಈ ನಡುವೆ ಯತ್ನಾಳ್ ಟೀಂ ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ವಿಜಯೇಂದ್ರ ವಿರುದ್ಧ ದೂರು ನೀಡಲಿದ್ದಾರೆ.

More articles

Latest article