Wednesday, December 4, 2024

ನೋಯ್ಡಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ರೂ.3 ಕೋಟಿ ಮೌಲ್ಯದ ಮೊಬೈಲ್‌ ಕಳವು

Most read

ಚಿಕ್ಕಬಳ್ಳಾಪುರ: ನೋಯ್ಡಾದಿಂದ ಬೆಂಗಳೂರಿಗೆ ಕಂಟೇನರ್‌ನಲ್ಲಿ ಸಾಗಿಸುತ್ತಿದ್ದ ಎಂ.ಐ ಕಂಪನಿಯ ಸುಮಾರು ರೂ. 3 ಕೋಟಿ ಮೌಲ್ಯದ ಮೊಬೈಲ್‌ಗಳು
ಕಳ್ಳತನವಾಗಿವೆ. ಈ ಸಂಬಂಧ ತಾಲ್ಲೂಕಿನ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಕಂಪನಿಯು ದೂರು ದಾಖಲಿಸಿದೆ.

ಕಂಟೇನರ್‌ನಲ್ಲಿ 6,660 ಮೊಬೈಲ್‌ಗಳು ಇದ್ದವು. ತಾಲ್ಲೂಕಿನ ರೆಡ್ಡಿ ಗೊಲ್ಲಾರಹಳ್ಳಿ ಗ್ರಾಮದ ಕ್ರಾಸ್ ಬಳಿ ಎನ್ಎಲ್ 01 ಎಎಫ್ 2743 ಸಂಖ್ಯೆಯ ಕಂಟೇನರ್ ನಿಲ್ಲಿಸಿ ಚಾಲಕ ರಾಹುಲ್ ನಾಪತ್ತೆ ಆಗಿದ್ದ. ಕಂಟೇನರ್ ನಿಗದಿತ ಸಮಯಕ್ಕೆ ಬೆಂಗಳೂರು ತಲುಪಿಲ್ಲ. ಕಂಟೇನರ್ ನಿಲುಗಡೆ ಆಗಿರುವುದು ಜಿಪಿಎಸ್ ಮೂಲಕ ಕಂಪನಿಯವರ ಗಮನಕ್ಕೆ ಬಂದಿದೆ. ತಕ್ಷಣ ಕಂಪನಿ ಸಿಬ್ಬಂದಿ ಪೆರೇಸಂದ್ರ ಠಾಣೆಗೆ ಮಾಹಿತಿ ನೀಡಿದ್ದರು. ಕಂಟೇನರ್‌ನಲ್ಲಿದ್ದ ಶೇ. 80ರಿಂದ 90ರಷ್ಟು ಮೊಬೈಲ್‌ಗಳ ಕಳ್ಳತನವಾಗಿದೆ. ಕಂಟೇನರ್
ಅನ್ನು ಕಂಪನಿಯವರ ಸುಪರ್ದಿಗೆ ನೀಡಲಾಗಿದೆ ಕಂಪನಿಯವರು ಚಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ.

ಯಾರನ್ನು ಬಂಧಿಸಲಾಗಿದೆ ಎಷ್ಟು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎನ್ನುವುದನ್ನು ಶೀಘ್ರ ಬಹಿರಂಗಪಡಿಸುವುದಾಗಿ ಜಿಲ್ಲಾ ಎಸ್ ಪಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

More articles

Latest article