ಬೆಂಗಳೂರು:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಮೂಲಭೂತ ಹಕ್ಕು. ಆದರೆ ಕರ್ನಾಟಕದಲ್ಲಿ ಪ್ರತಿಭಟನೆಯ ಹಕ್ಕನ್ನೇ ಮೊಟಕುಗೊಳಿಸುತ್ತಿರುವ ಸಂಚು ನಡೆಯುತ್ತಲೇ ಬಂದಿದೆ. ಬೀದಿಗಿಳಿದು ಪ್ರತಿಭಟನೆ ನಡೆಸಲೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 2021ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವಾಗ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು ಎಂದು ಕಾನೂನು ಮಾಡಿತ್ತು. ಈಗಿನ ಕಾಂಗ್ರೆಸ್ ಸರ್ಕಾರವೂ ಅದೇ ನೀತಿಯನ್ನು ಮುಂದುವರೆಸುತ್ತಿದೆ. ಈ ನಿಟ್ಟಿನಲ್ಲಿ ʼಹೋರಾಟದ ಹಕ್ಕಿಗಾಗಿ ಜನಾಂದೋಲನ ಸಂಘಟನೆʼ ಬಂಧೀಖಾನೆ ಉದ್ಯಾನದಿಂದ ಬೇಕು ಸ್ವಾತಂತ್ರ್ಯ ಹಾಗೂ ಪ್ರತಿಭಟನೆಯ ಹಕ್ಕು ಕುರಿತು ದುಂಡುಮೇಜನ ಸಭೆಯನ್ನು ಆಯೋಜಿಸಿದೆ. ಈ ನಿಯಂತ್ರಣವನ್ನು ಕೂಡಲೇ ಕೈಬಿಡಬೇಕು ಮತ್ತು ಬೀದಿ ಬೀದಿಗಳಲ್ಲಿ ಪ್ರತಿಭಟಿಸಲು ಮುಕ್ತ ಅವಕಾಶ ನೀಡಬೇಕು ಎಂದು ಸಂಸ್ಥೆ ಆಗ್ರಹಪಡಿಸಿದೆ.
ಸರ್ಕಾರದ ಈ ಸಂವಿಧಾನ ನಿಯಂತ್ರಣದ ವಿರುದ್ಧ 2023ರ ಆಗಸ್ಟ್ ನಿಂದಲೂ ಹೋರಾಠದ ಅಹಕ್ಕಿಗಾಗಿ ಜನಾಂದೋಲನವು ಸಹಿ ಸಂಗ್ರಹ ಚಳವಳಿ, ಪ್ರತಿಭಟನೆ ಮತ್ತು ಪ್ರದರ್ಶನಗಳನ್ನು ನಡೆಸುತ್ತಾ ಬಂದಿದೆ. ಆದರೂ ಈಗಿನ ಸರ್ಕಾರ ಆವುದೇ ಕ್ರಮ ಕೈಗೊಂಡಿಲ್ಲ. ಒಂದು ಕಾಳದಲ್ಲಿ ಗಲ್ಲು ಶಿಕ್ಷೆ ವಿಧಿಸುತ್ತಿದ್ದ ಸ್ವಾಂತ್ರ್ಯ ಉದ್ಯಾನ ನಿರ್ದೇಶನವು ಮೂಭೂತ ಹಕ್ಕುಗಳ ಮೇಲೆ ಬೀರುವ ಪರಿಣಾಮಗಳನ್ನು ಕುರಿತು ಚರ್ಚಿಸಲು ದುಂಡುಮೇಜಿನ ಸಭೆ ಆಯೋಜಿಸಲಾಗಿದೆ.
ಸಭೆಯಲ್ಲಿ ಬರಹಗಾರರು ಮತ್ತು ಚಿಂತಕರಾದ ಆಕಾರ್ ಪಟೇಲ್, ಲಿಂಗತ್ವ ಮತ್ತು ಲೈಂಗಿಕತೆ ಹಕ್ಕುಗಳ ಹೋರಾಟಗಾರರಾದ ಅಕೈ ಪದ್ಮಶಾಲಿ, , ಲೇಖಕರು ಮತ್ತು ಚಿಂತಕಿ ದು. ಸರಸ್ವತಿ, ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರೊ, ಬಾಬು ಮ್ಯಾಥ್ಯೂ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಲಿದ್ದಾರೆ. ಅಖಿಲ ಭಾರತ ನ್ಯಾಯಕ್ಕಾಗಿ ವಕೀಲರು ಸಂಘಟನೆಯ (AILAJ) ಅಧ್ಯಕ್ಷರಾದ ಮೈತ್ರೇಯಿ ಅವರು ಸಭೆಯ ಪ್ರಸ್ತಾವನೆ ಮಂಡಿಸುತ್ತಾರೆ. ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ (JCTU) ಸಂಚಾಲಕ ಕೆವಿ ಭಟ್ ಅವರು ಸಮಾಲೋಚನಾ ಸಭೆಯನ್ನು ನಡೆಸಿಕೊಡುತ್ತಾರೆ.
ಮುಖ್ಯ ಭಾಷಣಕಾರರು ಮಾತನಾಡಿದ ನಂತರ ಸಭೆಯಲ್ಲಿ ಭಾಗವಹಿಸಿದ ಇತರರು ಪ್ರತಿಭಟನೆಯ ಹಕ್ಕು ಮೊಟಕಾಗಿರುವುದರ ಕುರಿತು ಹಾಗೂ ಹಕ್ಕನ್ನು ಮತ್ತೆ ಪಡೆಯಲು ಯಾವ ರೀತಿಯ ಹೋರಾಟ ನಡೆಸಬೇಕು ಎನ್ನುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಆಸಕ್ತರು ಈ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ