ಬೆಂಗಳೂರು: ಮೊಬೈಲ್ ಫೋನ್‌ಗಳಿಗೆ ಬರುವ ಒಟಿಪಿ (One Time Password) ಗಳ ಮೂಲವನ್ನು ಪತ್ತೆ ಮಾಡುವ ಸಂಬಂಧ ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (TRAI) ರೂಪಿಸಿರುವ ಹೊಸ ನಿಯಮಾವಳಿಗೆ ಟೆಲಿಕಾಂ ಕಂಪನಿಗಳು ಇದೇ ನವೆಂಬರ್ 30ರೊಳಗೆ ಒಪ್ಪಿಗೆ ಸೂಚಿಸಬೇಕಾಗಿದೆ. ಒಂದು ವೇಳೆ ಈ ಗಡುವಿನೊಳಗೆ ಟೆಲಿಕಾಂ ಕಂಪನಿಗಳು ಒಪ್ಪಿಗೆ ಸೂಚಿಸದೇ ಹೋದಲ್ಲಿ ಡಿಸೆಂಬರ್ 1ರಿಂದ ಮೊಬೈಲ್‌ಗಳಿಗೆ ಒಟಿಪಿಗಳು ಬರುವುದಿಲ್ಲ ಎಂದು ತಿಳಿದು ಬಂದಿದೆ.
ಡಿಜಿಟಲ್ ಬ್ಯಾಂಕಿಂಗ್, ಆನ್‌ಲೈನ್ ಹಣಕಾಸು ವ್ಯವಹಾರಗಳಿಗೆ ಒಟಿಪಿ ಅನಿವಾರ್ಯವಾಗಿದೆ. ಟ್ರಾಯ್ ಗಡುವು ವಿಸ್ತರಿಸದಿದ್ದರೆ ಈ ಸೇವೆಗಳಲ್ಲಿ ಭಾರಿ ಸಮಸ್ಯೆ ತಲೆದೂರಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಆನ್‌ಲೈನ್ ಹಣಕಾಸು ವ್ಯವಹಾರದಲ್ಲಿ ಒಟಿಪಿಗಳ ಹೆಸರಿನಲ್ಲಿ ಇತ್ತೀಚೆಗೆ ವಂಚನೆಗಳ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಒಟಿಪಿಗಳ ಮೂಲವನ್ನು ಬಹಿರಂಗಗೊಳಿಸುವ ನಿಟ್ಟಿನಲ್ಲಿ ಟ್ರಾಯ್ ಹೊಸ ನಿಯಮಾವಳಿ ರೂಪಿಸಿದ್ದು ಇದಕ್ಕೆ ಜಿಯೊ, ವೊಡಾಫೋನ್, ಏರ್‌ಟೇಲ್, ಬಿಎಸ್‌ಎನ್‌ಎಲ್ ಸೇರಿದಂತೆ ಮೊಬೈಲ್ಕಂಪನಿಗಳು ಒಪ್ಪಿಗೆ ಸೂಚಿಸಿಲ್ಲ. ಒಂದು ವೇಳೆ ಗಡುವಿನೊಳಗೆ ಈ ಕಂಪನಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಒಟಿಪಿ ಸೇವೆಯಲ್ಲಿ ಕೊರತೆ ಉಂಟಾಗುವ ಸಾಧ್ಯತೆಗಳಿವೆ.