ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಅತೃಪ್ತರನ್ನು ಒಗ್ಗೂಡಿಸಿ ಪ್ರತ್ಯೇಕ ಬಣ ಕಟ್ಟುತ್ತಿರುವ ಮಾದರಿಯಲ್ಲೇ ಜೆಡಿಎಸ್ ನಲ್ಲಿರುವ ಅಸಮಾಧಾನಿತ ಶಾಸಕರು ಮತ್ತು ಮುಖಂಡರನ್ನು ಒಗ್ಗೂಡಿಸುವ ಕೆಲಸಕ್ಕೆ ಜೆಡಿಸ್ ಮಾಜಿ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮುಂದಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಏಕಪಕ್ಷೀಯ ವರ್ತನೆಯಿಂದ ಬೇಸರಗೊಂಡಿರುವ ಶಾಸಕರು, ಮಾಜಿ ಶಾಸಕರು ಮತ್ತಿತರ ನಾಯಕರನ್ನು ಒಗ್ಗೂಡಿಸಲು ಇಬ್ರಾಹಿಂ ಸಜ್ಜಾಗಿದ್ದಾರೆ.
ಇದರ ಮೊದಲ ಪ್ರಯತ್ನವಾಗಿ ಇಬ್ರಾಹಿಂ ಅವರ ಇಂದು ಮೈಸೂರಿನಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜೆಡಿಎಸ್ನ 12 -13 ಶಾಸಕರು ಪಕ್ಷದ ವಿಚಾರದಲ್ಲಿ ಬೇಸರಗೊಂಡಿದ್ದಾರೆ. ಜಿ.ಟಿ.ದೇವೇಗೌಡರಂತೆ ಹಲವು ಶಾಸಕರು ನೋವು ನುಂಗಿದ್ದಾರೆ. ನಾನು ಈಗ ಅವರನ್ನೆಲ್ಲ ಒಗ್ಗೂಡಿಸುವ ಕೆಲಸ ಆರಂಭಿಸಿದ್ದೇನೆ. ಮುಂದೆ ಏನಾಗುತ್ತದೆ ನೋಡೋಣ ಎಂದರು. ನಾನು ಈಗಲೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ. ನಮ್ಮ ಶಾಸಕರ ನೋವು ನಿವಾರಿಸುವ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ನಾವು ಜೆಡಿಎಸ್ ಹೆಸರಿನಲ್ಲಿ ಮುಂದುವರೆಯಬೇಕೇ ಎಂದು ಚರ್ಚಿಸುತ್ತೇವೆ ಎಂದರು.
ಜೆಡಿಎಸ್ ಲವ್ ಮಾಡಿದ ಬಿಜೆಪಿ ಬಸ್ ಸ್ಟ್ಯಾಂಡ್ ನಲ್ಲಿ ಬಿಟ್ಟಿದೆ. ಹೀಗಾಗಿ ಜಿ.ಟಿ. ದೇವೇಗೌಡ, ನಾವೆಲ್ಲ ಮಾತುಕತೆ ಮಾಡ್ತೀವಿ. ನಮ್ಮ ಸಂಪರ್ಕದಲ್ಲಿರುವ ಶಾಸಕರ ತೀರ್ಮಾನದಂತೆ ನಡೆಯುತ್ತೇವೆ. ದೇವೇಗೌಡರಿಗೆ ಈ ವಯಸ್ಸಿನಲ್ಲಿ ಈ ರೀತಿ ಆಗಬಾರದಿತ್ತು. ಒಮ್ಮೆ ರಾಜ್ಯದ ಜನರ ಮುಂದೆ ತಪ್ಪಾಗಿದೆ ಎಂದು ಅವರು ಹೇಳಬೇಕು. ಸ್ವಂತ ನಿರ್ಧಾರದ ಶಕ್ತಿ ದೇವೇಗೌಡರಲ್ಲಿಲ್ಲ. ಜೆಡಿಎಸ್ ಮನೆಗೆ ಬೆಂಕಿ ಬಿದ್ದಿದೆ ಎಂದು ಇಬ್ರಾಹಿಂ ತಮ್ಮದೇ ಶೈಲಿಯಲ್ಲಿ ಹೇಳಿದರು.
ಜಿ.ಟಿ.ದೇವೇಗೌಡ ಭೇಟಿಯಾದ ಇಬ್ರಾಹಿಂ. ಮೈಸೂರಿನ ಜಿಟಿಡಿ ನಿವಾಸದಲ್ಲಿ ಭೇಟಿ. ಜೆಡಿಎಸ್ ನ 12-13 ಶಾಸಕರ ಪಕ್ಷದ ವಿಚಾರದಲ್ಲಿ ಬೇಸರಗೊಂಡಿದ್ದಾರೆ. ಮೈಸೂರಿನಲ್ಲಿ ಕೇಂದ್ರದ ಮಾಜಿ ಸಚಿವ ಇಬ್ರಾಹಿಂ ಹೇಳಿಕೆ. ಜಿ.ಟಿ.ದೇವೇಗೌಡರಂತೆ ಹಲವು ಶಾಸಕರು ನೋವು ನುಂಗಿದ್ದಾರೆ. ನಾನು ಈಗ ಅವರನ್ನೆಲ್ಲ ಒಗ್ಗೂಡಿಸುವ ಕೆಲಸ ಶುರು ಮಾಡಿದ್ದೇನೆ. ಮುಂದೆ ಏನೇನಾಗುತ್ತೆ ನೋಡೋಣ – ಸಿ.ಎಂ. ಇಬ್ರಾಹಿಂ.