ಕೋಲಾರ: ನಗರದ ಸೆಂಟ್ರಲ್ ಬ್ಯಾಂಕ್ ನ ಮ್ಯಾನೇಜರ್ ಹಾಗೂ ಕೆಜಿಎಫ್ ನ ಮಾಜಿ ನಗರಸಭೆ ಅಧ್ಯಕ್ಷ ದಾಸ ಚಿನ್ನಸವರಿ ಮತ್ತು ಅವರ ಪಾಲುದಾರ ಸಂಘಮಿತ್ರ ಅವರನ್ನು ಜಿಲ್ಲಾ ಸಿ ಇ ಎನ್ ಹಾಗೂ ಬೆಂಗಳೂರಿನ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ನಗರ ಸಭೆ ಮಾಜಿ ಅಧ್ಯಕ್ಷ ಹಾಗೂ ಅವರ ಪಾಲುದಾರ ಕೋಲಾರದ ಸೆಂಟ್ರಲ್ ಬ್ಯಾಂಕ್ ನಲ್ಲಿ ನಕಲಿ ದಾಖಲೆಗಳನ್ನೂ ನೀಡಿ ಬ್ಯಾಂಕ್ ನಿಂದ 4 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿದ್ದರು. ಇವರಿಗೆ ಬ್ಯಾಂಕ್ ಮ್ಯಾನೇಜರ್ ಸಹ ಶಾಮೀಲಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಿಐಡಿ ಪೊಲೀಸರು ಮುಂಜಾನೆ 4 ರ ನಸುಕಿನಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ. ದಾಸ ಚಿನ್ನ ಸವರಿ ಬಿಜೆಪಿ ಮಾಜಿ ಶಾಸಕ ವೈ ಸಂಪಂಗಿ ರವರೊಂದಿಗೆ ಗುರುತಿಸಿಕೊಂಡಿದ್ದರು.