ಕಳೆದ ಒಂದು ತಿಂಗಳಿನಿಂದ ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಎಲ್ಲಾ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪ ವಾದ ವಿವಾದಕ್ಕೆ ತೆರೆ ಬಿದ್ದಿದೆ. ಇಂದು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣದಲ್ಲಿ ದಾಖಲೆಯ ಮತದಾನ ನಡೆದಿದೆ.
ಆಡಳಿತ ಮತ್ತು ವಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣದಲ್ಲಿ ಸಣ್ಣ ಪುಟ್ಟ ಗದ್ದಲದ ನಡುವೆಯೂ ದಾಖಲೆಯ 88.80ರಷ್ಟು ಮತದಾನವಾಗಿದೆ. ಅದೇ ರೀತಿ ಶಿಗ್ಗಾಂವಿಯಲ್ಲಿ 80.48ರಷ್ಟು, ಸಂಡೂರಿನಲ್ಲಿ 76.24ರಷ್ಟು ವೋಟಿಂಗ್ ಆಗಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ NDA ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಸ್ಪರ್ಧಿಸಿದ್ದರು. ಶಿಗ್ಗಾಂವಿ ಕ್ಷೇತ್ರದಿಂದ NDA ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಪಠಾಣ್ ಕಣದಲ್ಲಿದ್ದರು. ಸಂಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅನ್ನಪೂರ್ಣ ತುಕಾರಾಮ್ ಎದುರು ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಸ್ಪರ್ಧಿಸಿದ್ದು ಇವರೆಲ್ಲರ ಭವಿಷ್ಯ ಮತಯಂತ್ರ ಸೇರಿದೆ. ನವೆಂಬರ್ 23ಕ್ಕೆ ಫಲಿತಾಂಶ ಹೊರಬೀಳಲಿದೆ.
ಚನ್ನಪಟ್ಟಣ ಕ್ಷೇತ್ರ ಒಟ್ಟು 88.80% ಮತದಾನ ನಡೆದಿದೆ.
ಒಟ್ಟು ಮತದಾನ ಮಾಡಿದವರ ಸಂಖ್ಯೆ – 2,06,866.
ಪುರುಷ ಮತದಾರರು – 1,00,501
ಮಹಿಳಾ ಮತದಾರರು – 1,06,362
ತೃತೀಯಲಿಂಗಿಗಳು – 3
ಶಿಗ್ಗಾವಿ ಕ್ಷೇತ್ರ ಒಟ್ಟು 80.48% ಮತದಾನ ನಡೆದಿದೆ.
ಒಟ್ಟು ಮತದಾನ ಮಾಡಿದವರ ಸಂಖ್ಯೆ – 1,91,166
ಪುರುಷ ಮತದಾರರು- 98,642
ಮಹಿಳಾ ಮತದಾರರು- 92,522
ತೃತೀಯ ಲಿಂಗಿಗಳು – 2
ಸಂಡೂರು ಕ್ಷೇತ್ರ ಒಟ್ಟು 76.24% ಮತದಾನ ನಡೆದಿದೆ.
ಒಟ್ಟು ಮತದಾನ ಮಾಡಿದವರ ಸಂಖ್ಯೆ – 1,80,189
ಪುರುಷ ಮತದಾರರು – 90,922
ಮಹಿಳೆ ಮತದಾರರು – 89,252
ತೃತೀಯಲಿಂಗಿಗಳು -12