ವ್ಯಕ್ತಿಯೊಬ್ಬರನ್ನು ಕಾಲಿನಿಂದ ಒದ್ದ ಬಿಜೆಪಿ ಮುಖಂಡ; ನೆಟ್ಟಿಗರ ಆಕ್ರೋಶ

Most read

ಮುಂಬೈ: ಮಹಾರಾಷ್ಟ್ರದ ಬಿಜೆಪಿಯ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ರಾವ್ಸಾಹೇಬ್ ದಾನ್ವಿ ಅವರು ತಮ್ಮೊಂದಿಗೆ ಫೋಟೊಗೆ ಪೋಸ್ ಕೊಡಲು ಬಂದ ವ್ಯಕ್ತಿಯೊಬ್ಬರನ್ನು ಕಾಲಿನಿಂದ ಒದ್ದಿರುವುದು ವಿವಾದಕ್ಕೆ ಕಾರಣವಾಗಿದೆ. ಹಾಗೆಯೇ ಈ ಮುಖಂಡರ ವರ್ತನೆಗೆ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ.


ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾವ್ಸಾಹೇಬ್ ದಾನ್ವೆ ರಾಜ್ಯದಾದ್ಯಂತ ಪ್ರಚಾರದಲ್ಲಿ ನಿರತರಾಗಿದ್ದಾರೆ. ಜಲ್ಲಾ ಜಿಲ್ಲೆಯ ಭೋಕರ್ದನ್ನಲ್ಲಿ ಸೋಮವಾರ ದಾನ್ಯ ಅವರು ಶಿವಸೇನಾ ನಾಯಕ, ಮಾಜಿ ಸಚಿವ ಅರ್ಜುನ್ ಖೋಟ್ಕರ್ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ದಾನ್ವೆ-ಅರ್ಜುನ್ ಅವರೊಂದಿಗೆ ಫೋಟೊಗೆ ಪೋಸ್ ಕೊಡಲು ಬರುತ್ತಿದ್ದರು. ಆಗ ಆತನನ್ನು ಕಾಲಿನಿಂದ ಒದ್ದಿರುವ ದಾನೆ, ದೂರ ಹೋಗುವಂತೆ ಸೂಚಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ರಾವ್ಸಾಹೇಬ್ ದಾನ್ವಿ ಅವರು ವ್ಯಕ್ತಿಯನ್ನು ಒದ್ದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ದಾನ್ವಿ ವಿರುದ್ಧ ನೆಟ್ಟಿಗರು ಕೆಂಡಕಾರಿದ್ದಾರೆ.


ಒದೆಸಿಕೊಂಡ ವ್ಯಕ್ತಿಯನ್ನು ಶೇಖ್‌ ಎಂದು ಗುರುತಿಸಲಾಗಿದೆ. ಆತ ತಾನು ಮತ್ತು ದಾನ್ವೆ ಅವರು 30 ವರ್ಷಗಳಿಂದ ಉತ್ತಮ ಸ್ನೇಹಿತರು ಎಂದು ಹೇಳಿಕೊಂಡಿದ್ದು, ನಾನು ಅವರ ಅಂಗಿಯನ್ನು ಸರಿಪಡಿಸುತ್ತಿದ್ದೆ ಎಂದು ಸ್ಪಷ್ಟನೆ ನೀಡುವ ಪ್ರಯ್ನ ಮಾಡಿದ್ದಾರೆ.ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ರಾವ್‌ ಸಾಹೇಬ್‌ ಫುಟ್‌ ಬಾಲ್‌ ತಂಡದಲ್ಲಿ ಇರಬೇಕಿತ್ತು. ಆದ್ದರಿಂದ ಬಿಜೆಪಿಗೆ ಮತ ಚಲಾಯಿಸುವ ಮುನ್ನ ಒಮ್ಮೆ ಯೋಚಿಸಿ ಎಂದು ಹೇಳಿದ್ದಾರೆ.

More articles

Latest article