ಸಂಡೂರು : ಸಂಡೂರು ವಿಧಾನಸಭಾ ಕ್ಷೇತ್ರದ ವಿವಿಧ ಬಾಗಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿರುಸಿನ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಅನ್ನಪೂರ್ಣ, ಸಂಸದ ತುಕಾರಾಂ, ಸಚಿವರು, ಶಾಸಕರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಕ್ಷೇತ್ರದ ವ್ಯಾಪ್ತಿಯ ಏಳುಬೆಂಚಿ ಗ್ರಾಮದಲ್ಲಿ ಮಾತನಾಡಿದ ಅವರು ಕೈ ಅಭ್ಯರ್ಥಿ ಅನ್ನಪೂರ್ಣ ಅವರಿಗೆ ಏಕೆ ಮತ ನೀಡಬೇಕೆಂದು ಮತದಾರರಿಎಗ ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ರಾಜ್ಯಸರ್ಕಾರದ ವಿರುದ್ಧ ಸುಳ್ಳು ಆಪಾದನೆಗಳನ್ನು ಮಾಡುತ್ತಾ ಬಂದಿರುವ ಪ್ರಧಾನಿ ಮೋದಿ ವಿರುದಧ ಹರಿಹಾಯ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ಮುಖ್ಯಾಂಶಗಳು ಹೀಗಿವೆ:
*ಶಾಸಕರಾಗಿದ್ದ ಈ.ತುಕಾರಾಮ್ ಅವರು ಲೋಕಸಭೆಗೆ ಸ್ಪರ್ಧಿಸಲು ಸಿದ್ದರಿರಲಿಲ್ಲ. ಆದರೆ ನಾವು ನಡೆಸಿದ ಎಲ್ಲಾ ಸಮೀಕ್ಷೆಗಳಲ್ಲೂ ಜನಾಭಿಪ್ರಾಯ ಈ.ತುಕಾರಾಮ್ ಅವರ ಪರವಾಗಿಯೇ ತುಂಬಾ strong ಇತ್ತು. ಆದ್ದರಿಂದ ಕಾಂಗ್ರೆಸ್ ಹೈ ಕಮಾಂಡ್ ಈ.ತುಕಾರಾಮ್ ಅವರಿಗೇ ಟಿಕೆಟ್ ನೀಡಿತು.
*ಈ ಸಂಡೂರು ಉಪ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವ ಸಮೀಕ್ಷೆ ನಡೆಸಿದಾಗ ಈ.ತುಕಾರಾಮ್ ಪತ್ನಿ ಅನ್ನಪೂರ್ಣಮ್ಮ ಅವರು ಗೆದ್ದೇ ಗೆಲ್ತಾರೆ ಎನ್ನುವ ವರದಿ ಬಂದಿದ್ದರಿಂದ ಇವರಿಗೆ ಟಿಕೆಟ್ ನೀಡಿದ್ದೇವೆ. ಆದ್ದರಿಂದ ಇವರನ್ನು ಗೆಲ್ಲಿಸಿ ಕಳುಹಿಸಿ.
ಸಂಡೂರಿನ ಜನರಿಗೆ, ಸಂಡೂರಿಗೆ, ಬಳ್ಳಾರಿ ಜನರಿಗೆ ಕೆಟ್ಟ ಹೆಸರು ತಂದ ರೆಡ್ಡಿಗೆ, ಬಿಜೆಪಿಗೆ ಮತ್ತೆ ಮತ ಹಾಕಿದ್ರೆ ನಿಮ್ಮ ಮತಕ್ಕೆ ಗೌರವ ಬರ್ತದಾ ಯೋಚಿಸಿ. ನನಗೆ ಬಳ್ಳಾರಿಗೆ ಕಾಲು ಇಡಿ ನೋಡೋಣ ಅಂತ ರೆಡ್ಡಿ ಸವಾಲು ಹಾಕಿದ್ದರು. ನಾನು ಸವಾಲು ಸ್ವೀಕರಿಸಿ ಪಾದಯಾತ್ರೆ ಮೂಲಕವೇ ಬಳ್ಳಾರಿಗೆ ಬಂದು ಸೆಡ್ಡು ಹೊಡೆದೆ. ಅಲ್ಲಿಂದಲೇ ರೆಡ್ಡಿ ಅವನತಿ ಶುರುವಾಯಿತು.
*ಸಿದ್ದರಾಮಯ್ಯ ಇರುವವರೆಗೂ ಬಿಜೆಪಿ ಅಧಿಕಾರಕ್ಕೆ ಬರೋದಕ್ಕೆ ಬಿಡೋದಿಲ್ಲ ಅನ್ನೋದು ಬಿಜೆಪಿಯವರಿಗೆ ಗೊತ್ತಾಗಿದೆ. ಆದ್ದರಿಂದ ಬಿಜೆಪಿ ಹೊಟ್ಟೆಕಿಚ್ಚಿನಿಂದ ನನ್ನನ್ನು ಮುಗಿಸಲು ಯತ್ನಿಸುತ್ತಿದೆ. CBI, ED, IT ಯನ್ನು ಬಳಸಿಕೊಂಡು ಷಡ್ಯಂತ್ರ ಮಾಡುತ್ತಿದೆ. ನಾನು ಬಡವರ ಪರವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೂ ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಆದ್ದರಿಂದ ಸುಳ್ಳು ಕೇಸು ಹಾಕಿಸಿದ್ದಾರೆ ನನ್ನ ಮೇಲೆ. ನಾನೂ ಹಳ್ಳಿಯಿಂದ ಬಂದವನು. ಇಂಥಾದ್ದಕ್ಕೆಲ್ಲಾ ಹೆದರುವ ಮಗ ನಾನಲ್ಲ.
*ನಮ್ಮ ಬಳಿ ಸಂಬಳ ಕೊಡೋಕೆ ದುಡ್ಡಿಲ್ಲ ಅಂತ ಮೋದಿ ಹೇಳ್ತಾರೆ. ನಾನು ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ರೂಪಾಯಿ ಜೊತೆಗೆ ಒಂದು ಲಕ್ಷ 20 ಸಾವಿರ ಕೋಟಿ ಅಭಿವೃದ್ಧಿಗೆ ಹಣ ಕೊಟ್ಟಿದ್ದೇವೆ. ಇದೆಲ್ಲಾ ಎಲ್ಲಿಂದ ಬಂತು ಮಿಸ್ಟರ್ ಮೋದಿ ಎಂದು ಪ್ರಶ್ನಿಸಿದರು. 15ನೇ ಹಣಕಸು ಆಯೋಗದಿಂದ 11495 ಕೋಟಿ ರೂಪಾಯಿ ಕೇಂದ್ರದಿಂದ ನಮಗೆ ಕೇಂದ್ರ ಸರ್ಕಾರ ಕೊಡಬೇಕಿತ್ತು. ಇದು ನಮ್ಮದೇ ಪಾಲಿನ ಹಣ. ಇದನ್ನು ರಾಜ್ಯಕ್ಕೆ ಕೊಡದೆ ನಮಗೆ ವಂಚಿಸಿದ್ದಾರೆ. ಇದೂ ಸೇರಿ ಒಟ್ಟು 17000 ಕೋಟಿ ರೂಪಾಯಿ ನಮಗೆ ಕೇಂದ್ರ ಸರ್ಕಾರದಿಂದ ವಂಚನೆಯಾಗಿದೆ
*ನಮ್ಮ ಪಾಲಿನ 17000 ಕೋಟಿ ಹಣ ಬಂದಿದ್ದರೆ ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಿ ಬಿಡ್ತಾರೆ ಎನ್ನುವ ಕಾರಣದಿಂದ ನಮಗೆ ವಂಚಿಸಿ ರಾಜ್ಯದ ಅಭಿವೃದ್ಧಿಗೆ ಮೋದಿ ಕಂಟಕರಾಗಿದ್ದಾರೆ. ರಾಜ್ಯದಲ್ಲಿ ಕಲ್ಯಾಣ ಕರ್ನಾಟಕಕ್ಕೆ 371ಜೆ ಜಾರಿ ಮಾಡಲು ಬಿಜೆಪಿ ವಿರೋಧಿಸಿತ್ತು. ಯಾವುದೇ ಕಾರಣಕ್ಕೂ ಕೊಡಬಾರದು ಎಂದು ಬಿಜೆಪಿ ತೀರ್ಮಾನಿಬಿಟ್ಟಿತ್ತು.
*ಆದರೆ ಕೇಂದ್ರದಲ್ಲಿದ್ದ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ 371 ಜೆ ಜಾರಿ ಮಾಡಿತು. ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಸಹಕಾರದಲ್ಲಿ 371ಜೆ ಜಾರಿಯಾಯ್ತು. ಇದು ಜಾರಿ ಆಗುತ್ತಿದ್ದಂತೆ ನಾನು 5000 ಕೋಟಿ ವಿಶೇಷ ಅನುದಾನವನ್ನು ಬಳ್ಳಾರಿ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಿದ್ದೇನೆ. ಬಿಜೆಪಿ ಯವರು ಏನು ಕೊಟ್ಟಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.
ಆದ್ದರಿಂದ ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸಿ ಸಂಡೂರಿನ ಅಭಿವೃದ್ಧಿಗೆ ನಿಮ್ಮ ಮತ ಹಾಕಿ ಎಂದು ಕರೆ ನೀಡಿದರು.