ಸಾಗರದ ವನಶ್ರೀ ಮಂಜಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲು; ಆರೋಪಿ ಪರಾರಿ

Most read

ಶಿವಮೊಗ್ಗ ಜಿಲ್ಲೆ ಸಾಗರದ ವನಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹೊನ್ನೇಸರ ಪಿಣಿಯಜ್ಜಿ ಮಂಜಪ್ಪ ಆಲಿಯಾಸ್ ವನಶ್ರೀ ಮಂಜಪ್ಪ ವಿರುದ್ಧ ಎರಡನೇ ಬಾರಿಗೆ ಪೋಕ್ಸೋ ಮತ್ತು ಎಸ್ ಸಿ. ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಮತ್ತೊಮ್ಮೆ ಎಫ್ ಐ ಆರ್ ದಾಖಲಾಗಿದೆ.

2023ರ ಜೂನ್ ತಿಂಗಳಲ್ಲೂ ಈತನ ವಿರುದ್ಧ ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ದೂರು ದಾಖಲಾಗಿತ್ತು. ಇದೀಗ ಮಂಜಪ್ಪ ಮತ್ತೊಮ್ಮೆ ತನ್ನ ಹಳೆಯ ಚಾಳಿ ಆರಂಭಿಸಿದ್ದಾನೆ.

ಈತನಿಂದ ಲೈಂಗಿಕ ಕಿರುಕ್ಕೊಳಗಾದ ಬಾಲಕಿಯ ಪೋಷಕರು ಇಂದು ಬುಧವಾರ ದೂರು ನೀಡಿದ್ದಾರೆ. ನೊಂದ ಬಾಲಕಿಯ ಪೋಷಕರು 5 ತಿಂಗಳ ಹಿಂದೆಯಷ್ಟೇ 9ನೇ ತರಗತಿಗೆ ದಾಖಲು ಮಾಡಿದ್ದರು. ಆರಂಭದಲ್ಲಿ ಒಂದು ತಿಂಗಳು ಸುಮ್ಮನಿದ್ದ ಮಂಜಪ್ಪ ಕಳೆದ 4 ತಿಂಗಳಿನಿಂದ ಕಿರುಕುಳ ನೀಡಲು ಆರಂಭಿಸಿದ್ದ. ಪತ್ನಿ ಇಲ್ಲದ ಸಮಯದಲ್ಲಿ ಮಂಜಪ್ಪ
ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅಶ್ಲೀಲವಾಗಿ ವರ್ತಿಸುತ್ತಿದ್ದ. ಬೇಡ ಎಂದು ಬೇಡಿಕೊಂಡರೂ ಖಾಸಗಿ ಅಂಗಾಂಗಗಳನ್ನು ಮುಟ್ಟಿ ಹಿಂಸಿಸುತ್ತಿದ್ದ. ಕಳೆದ 4 ತಿಂಗಳಲ್ಲಿ ಪ್ರತಿ ತಿಂಗಳು ನಾಲ್ಕೈದು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದಸರಾ ಹಬ್ಬದ ಸಮಯದಲ್ಲಿ ನೊಂದ ಬಾಲಕಿಯನ್ನು ಕರೆದುಕೊಂಡು ಹೋಗಲು ಬಂದಾಗ ಮಂಜಪ್ಪ ಮತ್ತು ವಾರ್ಡನ್ ಇಬ್ಬರೂ ಸೇರಿ ಸುಳ್ಳು, ಆಪಾದನೆ ಹೊರಿಸಿ ಬಲವಂತವಾಗಿ ಟಿಸಿ ಕೊಟ್ಟು ಕಳುಹಿಸಿದ್ದಾರೆ.

ನೊಂದ ಬಾಲಕಿ ಮತ್ತೆ ಬೆಂಗಳೂರಿಗೆ ಹೋದ ನಂತರ ತನ್ನ ತಾಯಿಗೆ ಎಲ್ಲ ವಿಚಾರವನ್ನು ತಿಳಿಸಿದ್ದಾಳೆ. ಆಗ ಆಕೆಯ ಪೋಷಕರು ದೂರು ನೀಡಿದ್ದಾರೆ. ಮಂಜಪ್ಪ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವನಶ್ರೀ ಶಾಲೆಯನ್ನು ನಡೆಸುತ್ತಿದ್ದಾನೆ. 2023ರಲ್ಲಿ ಇಂತಹುದೇ ಪ್ರಕರಣಕ್ಕೆ ಮಂಜಪ್ಪ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ.

ಈ ಬಾರಿ ದೂರು ದಾಖಲಾಗುತ್ತಿದ್ದಂತೆ ಮಂಜಪ್ಪ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

More articles

Latest article