ಬೆಂಗಳೂರು: ನಮ್ಮ ಮೆಟ್ರೊ ಹಸಿರು ಮಾರ್ಗದ ವಿಸ್ತರಿತ ಪ್ರದೇಶ ನಾಗಸಂದ್ರ-ಮಾದಾವರ ನಡುವೆ ಮೆಟ್ರೊ ರೈಲು ಸಾರ್ವಜನಿಕ ಸಂಚಾರ ನ.7 ರಂದು
ಆರಂಭವಾಗಲಿದೆ.
ನಾಳೆ ಬೆಳಿಗ್ಗೆ 5ಕ್ಕೆ ಮಾದಾವರದಿಂದ ಮೊದಲ ವಾಣಿಜ್ಯ ಸಂಚಾರ ಪ್ರಾರಂಭವಾಗಲಿದೆ. ರಾತ್ರಿ 11ಕ್ಕೆ ಕೊನೆಯ ರೈಲು ಹೊರಡಲಿದೆ.
ನಾಗಸಂದ್ರ-ಮಾದಾವರ ನಡುವೆ ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ಹಸಿರು ಮಾರ್ಗದ ಇತರ ಪ್ರದೇಶಗಳಲಿ ರೈಲು ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಮೆಟ್ರೊ ಪ್ರಯಾಣದ ಕನಿಷ್ಠ ದರ ರೂ. 10 ಹಾಗೂ ಗರಿಷ್ಠ ದರ 60 ರೂಪಾಯಿ ಇರಲಿದೆ ಎಂದು ನಮ್ಮ ಮೆಟ್ರೋ ಮಾಹಿತಿ ನೀಡಿದೆ.
2017 ರ ಮೇ ತಿಂಗಳಲ್ಲಿ ಹಸಿರು ಮಾರ್ಗದಲ್ಲಿ 3.7 ಕಿ.ಮೀ. ಉದ್ದದ ಮಾರ್ಗದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಭೂ ಸ್ವಾಧೀನದಲ್ಲಿ ಉಂಟಾದ ತೊಡಕು ಮತ್ತು ಕೋವಿಡ್ ಕಾರಣಕ್ಕಾಗಿ ಕಾಮಗಾರಿ ವಿಳಂಬವಾಗಿತ್ತು. 27 ತಿಂಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ 91 ತಿಂಗಳ ನಂತರ ಮುಗಿದಿತ್ತು.