ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಇಪ್ಪತ್ತೈದು ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಸೋಲಾಪುರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಫಲಾನುಭವಿಗಳಿಗೆ ಮನೆಗಳ ಕೀ ಹಸ್ತಾಂತರಿಸಿ ಮಾತನಾಡಿ, “ಇಂತಹ ಮನೆಗಳಲ್ಲಿ ವಾಸಿಸುವ ಬಗ್ಗೆ ಕನಸು ಕಂಡ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಇದು 10 ವರ್ಷಗಳ ತಪಸ್ಸಿನ ಫಲವಾಗಿದ್ದು, ಸಾವಿರಾರು ಕುಟುಂಬಗಳ ಕನಸುಗಳು ಸಾಕಾರಗೊಂಡಿದೆ. ಇದು ಬಡತನ ನಿರ್ಮೂಲನೆ ಮಾಡಲು ಇತರರಿಗೆ ಶಕ್ತಿ ನೀಡುತ್ತದೆ ಮತ್ತು ಸ್ಫೂರ್ತಿ ನೀಡುತ್ತದೆ” ಎಂದು ಹೇಳಿದರು.
ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ 8 ಅಮೃತ್ (ಅಟಲ್ ಮಿಷನ್ ಫಾರ್ ರಿಜುವೆನೇಷನ್ ಅಂಡ್ ಅರ್ಬನ್ ಟ್ರಾನ್ಸ್ಫಾರ್ಮೇಶನ್) ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅವರು ರಾಜ್ಯದಲ್ಲಿ ಪಿಎಂ-ಸ್ವನಿಧಿಯ 10,000 ಫಲಾನುಭವಿಗಳಿಗೆ 1 ಮತ್ತು 2 ನೇ ಕಂತುಗಳ ವಿತರಣೆಗೆ ಚಾಲನೆ ನೀಡಿದರು.
ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿ ಜನರು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಪಟ್ಟಿಯಿಂದ ಹೊರಬಂದಿದ್ದಾರೆ. 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ನಾವು ದೇಶದ ಬಡವರಿಗೆ ಮಾತ್ರ ಸಾಧನಗಳನ್ನು ಒದಗಿಸಿದ್ದೇವೆ. ಸೌಲಭ್ಯಗಳನ್ನು ಒದಗಿಸಲಾಗಿದೆ. ಅವರೇ ಬಡತನದಿಂದ ಮೇಲೇರಲು ಪ್ರಯತ್ನಿಸಿದರು.
ನೀವು ಅನುಭವಿಸಿದ ಕಷ್ಟಗಳು ಈಗ ನಿಮ್ಮ ಮಕ್ಕಳಿಗೆ ನೋಡಲು ಸಿಗುವುದಿಲ್ಲ. ಗುಡಿಸಲಿನ ಬದಲು ಗಟ್ಟಿಯಾದ ಮನೆಯಲ್ಲಿ ವಾಸಕ್ಕೆ ಅವಕಾಶ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೊಲ್ಲಾಪುರದಲ್ಲಿ ಹೇಳಿದ್ದಾರೆ.