ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಬಿಸಿ ತಾರಕಕ್ಕೇರಿದೆ. ಸಿಪಿ ಯೋಗೇಶ್ವರ್ mlcಗೆ ಹಾಗೂ ಬಿಜೆಪಿಗೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿ ಚನ್ನಪಟ್ಟಣ ಅಭ್ಯರ್ಥಿಯಾಗಿ ಇಂದು ನಾಮ ಪತ್ರ ಕೂಡ ಸಲ್ಲಿಸಿದ್ದಾರೆ. ಆದರೆ ಜೆಡಿಎಸ್ ಪಕ್ಷದಿಂದ ಯಾವುದೇ ಅಭ್ಯರ್ಥಿಯ ಹೆಸರನ್ನು ಇನ್ನೂ ಘೋಷಣೆ ಮಾಡಿಲ್ಲ. ಆದರೆ ತಮ್ಮ ಕುಟುಂಬದ ಸದಸ್ಯರನ್ನೇ ನಿಲ್ಲಿಸಲು HDK ಸಿದ್ದತೆ ಮಾಡಿಕೊಂಡಿದ್ದು, ಬಹುತೇಕ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೊಂಡ ಬೆನ್ನಲ್ಲೇ ಜೆಡಿಎಸ್‌ನಲ್ಲಿ ತಳಮಳ ಶುರುವಾಗಿದ್ದು, ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಒಂದು ಕಡೆ ಜೆಡಿಎಸ್ ಕ್ಷೇತ್ರವಾಗಿರುವ ಚನ್ನಪಟ್ಟಣವನ್ನು ಬಿಟ್ಟು ಕೊಡುವುದು ಬೇಡ ಎಂದು ನಿಖಿಲ್ಗೆ ಕುಮಾರಸ್ವಾಮಿ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಆದರೆ 2023ರಲ್ಲಿ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರವನ್ನು ಯಾರಿಗೂ ಬಿಟ್ಟು ಕೊಡದೇ ಗೆದ್ದಿದ್ದರು. ಆದರೆ ಒಂದು ವರ್ಷ ತುಂಬುವ ಮೊದಲೇ ಲೋಕಸಭೆಗೆ ಮಂಡ್ಯಗೆ ಹೋಗಿ ಗೆದ್ದು ಚನ್ನಪಟ್ಟಣವನ್ನು ಅನಾಥ ಮಾಡಿರುವುದು ಸ್ಥಳೀಯ ಜನರಲ್ಲಿ ಬೇಸರ ತಂದಿದೆ. ಜೊತೆಗೆ ಮುಸಲ್ಮಾನರಿಂದ ನಾನು ಗೆದ್ದಿಲ್ಲ ಎಂಬ ಹೇಳಿಕೆಗಳು ಕೂಡ ಈ ಚುನಾವಣೆ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
ಇನ್ನೂ ಈ ಚುನಾವಣೆ ಸೋತರೆ ರಾಮನಗರ ಜಿಲ್ಲೆಯಲ್ಲಿ ಯಾವುದೇ ಜೆಡಿಎಸ್ ಶಾಸಕರ ಇರುವುದಿಲ್ಲ ಜಿಲ್ಲೆಯಲ್ಲಿ ಜೆಡಿಎಸ್ ಅಸ್ಥಿತ್ವವೇ ಇಲ್ಲಾದಾಗೆ ಆಗತ್ತೆ ಅನ್ನೊ ಭಯ ಈಗ ದಳಪತಿಗಳಿಗೆ ಕಾಡುತ್ತಿದೆ. ಈ ಒಂದು ಎಮೋಷನ್ ಮೇಲೆ ಈಸಲ ಚುನಾವಣೆ ನಡೆಸಬಹುದು. ಹಾಗೂ ಸತತ ಸೋಲನ್ನು ನೋಡಿರುವ ನಿಖಿಲ್ ಮೇಲೆ ಜನರಿಗೆ ಯಾವ ಭಾವನೆ ಇದೆ ಅನ್ನುವುದು ಇಲ್ಲಿ ಲೆಕ್ಕಾಚಾರ ನಡೆಯತ್ತೆ.