ಹೋಟೆಲ್ ಉದ್ಯಮಿ ಜಯ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 2001 ರಲ್ಲಿ ಶಿಕ್ಷೆಗೆ ಒಳಗಾಗಿದ್ದ ಭೂಗತ ಪಾತಕಿ ಛೋಟಾ ರಾಜನ್ ಗೆ ಬಾಂಬೆ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.
ವಿಶೇಷ ಮೋಕಾ ನ್ಯಾಯಾಲಯವು ಛೋಟಾ ರಾಜನ್ ಹಾಗೂ ಮತ್ತಿತರರನ್ನು ಮೇ 30, 2024ರಂದು ಅಪರಾಧಿಗಳು ಎಂದು ಘೋಷಿಸಿತ್ತು ಹಾಗೂ ಛೋಟಾ ರಾಜನ್ ಗೆ ಜೀವಾವಧಿಯನ್ನು ಶಿಕ್ಷೆಯನ್ನು ಕೂಡ ವಿಧಿಸಿತ್ತು.
2011ರಲ್ಲಿ ನಡೆದಿದ್ದ ಪತ್ರಕರ್ತ ಜ್ಯೋತಿರ್ಮೊಯ್ ಡೇ ಹತ್ಯೆ ಪ್ರಕರಣದಲ್ಲಿ ಛೋಟಾ ರಾಜನ್ ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಎರಡನೆ ಪ್ರಕರಣ ಇದಾಗಿದ್ದು, ಆತ ಸೆರೆವಾಸ 2011 ರಿಂದ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
ವಿಶೇಷ ಮೋಕಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಛೋಟಾ ರಾಜನ್ ಸಲ್ಲಿಸಿರುವ ಮೇಲ್ಮನವಿ ತೀರ್ಮಾನವಾಗುವವರೆಗೂ, ಆತನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವ ನ್ಯಾ. ರೇವತಿ ಮೋಹಿತೆ-ಡೇರೆ ಹಾಗೂ ಪೃಥ್ವಿರಾಜ್ ಚವಾಣ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು, ಜಾಮೀನನ್ನೂ ಮಂಜೂರು ಮಾಡಿದೆ.