ಅಮ್ಮ ಆಸ್ಪತ್ರೆಯಲ್ಲಿದ್ದರೂ ಕಿಚ್ಚ ಸುದೀಪ್ ಬಿಬಿ ಶೂಟಿಂಗ್‌ ನಲ್ಲಿ ನಿರತರಾಗಿದ್ದು ಏಕೆ?

Most read

ನನ್ನ ಅಮ್ಮ ನಿಷ್ಪಕ್ಷಪಾತಿ. ಪ್ರೀತಿಸುವ, ಕ್ಷಮಿಸುವ, ಕಾಳಜಿ ಮಾಡುವ ಮತ್ತು ಕೊಡುಗೈ ದಾನಿ. ನನ್ನ ಬದುಕಿನಲ್ಲಿ ತುಂಬಾ ಮಹತ್ವವುಳ್ಳ ನೀವು ಸದಾ ನೆನಪಿನಲ್ಲಿ ಉಳಿಯುತ್ತೀರಿ. ಏಕೆಂದರೆ ಆಕೆ ನನ್ನ ಹಬ್ಬ, ನನ್ನ ಗುರು, ನನ್ನ ಏಳಿಗೆ ಬಯಸುವಾಕೆ. ಒಟ್ಟಾರೆ ನನ್ನ ಅಮ್ಮ ಮನುಷ್ಯ ರೂಪದಲ್ಲಿರುವ ಎರಡನೇ ದೇವರು. ಮಹತ್ವಾಕಾಂಕ್ಷಿ. ಏಕೆಂದರೆ ಆಕೆ ನನ್ನ ಮೊದಲ ಫ್ಯಾನ್.‌ ನನ್ನ ಅತ್ಯಂತ ಕೆಟ್ಟ ಕೆಲಸವನ್ನೂ ಪ್ರೀತಿಸುವಾಕೆ.
ಮಹತ್ವಾಕಾಂಕ್ಷಿ. ಏಕೆಂದರೆ ಈಗ ಆಕೆ ನನ್ನ ಸುಂದರ ನೆನಪು.

ಈ ಕ್ಷಣಕ್ಕೆ ನಾನು ಅನುಭವಿಸುತ್ತಿರುವ ನೋವನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ನನ್ನಲ್ಲಿ ಪದಗಳಿಲ್ಲ. ಘಟಿಸಿರುವುದನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಕೇವಲ 24 ಗಂಟೆಗಳಲ್ಲಿ ಎಲ್ಲವೂ ಬದಲಾಗಿದೆ.

ಪ್ರತಿದಿನ ಮುಂಜಾನೆ 5.30ಕ್ಕೆ ನನ್ನ ಮೊಬೈಲ್‌ ಮೊದಲ ಬಾರಿಗೆ ಸದ್ದಾಗುತ್ತದೆ. “ಗುಡ್‌ ಮಾರ್ನಿಂಗ್‌ ಕಂದ” ಎಂಬ ಸಂದೇಶ ನನ್ನ ಅಮ್ಮನಿಂದ ಬಂದಿರುತ್ತದೆ. ಶುಭ ಬೆಳಗಿನ ನನ್ನ ಅಮ್ಮನ ಸಂದೇಶ ಕೊನೆಯದಾಗಿ ಬಂದಿದ್ದು ಅಕ್ಟೋಬರ್‌ 18ರಂದು. ಹಲವು ವರ್ಷಗಳ ನಂತರ ಮೊದಲ ಬಾರಿಗೆ ಮರುದಿನ ಬೆಳಗ್ಗೆ ನಾನು ಏಳುವಾಗ ಅಮ್ಮನ ಗುಡ್‌ ಮಾರ್ನಿಂಗ್‌ ಸಂದೇಶ ಬಂದಿರಲಿಲ್ಲ. ಆದರೂ ನಾನು ಗುಡ್‌ ಮಾರ್ನಿಂಗ್‌ ಸಂದೇಶ ಕಳುಹಿಸಿದೆ. ಬಿಗ್‌ ಬಾಸ್‌ ಶೂಟಿಂಗ್‌ ನಲ್ಲಿ ನಿರತನಾಗಿದ್ದು, ಸ್ವಲ್ಪ ಸಮಯದ ನಂತರ ಕರೆ ಮಾಡಿ ಅಮ್ಮನನ್ನು ವಿಚಾರಿಸುವವನಿದ್ದೆ. ಶನಿವಾರದ ಬಿಗ್‌ ಬಾಸ್‌ ಎಪಿಸೋಡ್‌ ಕುರಿತ ಚರ್ಚೆಯೇ ಇಡೀ ಸಮಯವನ್ನು ನುಂಗಿ ಹಾಕಿತು. ಸ್ಟೇಜ್‌ ಮೇಲೆ ಹೋಗುವುದಕ್ಕೂ ಮುನ್ನ ಅಮ್ಮನನ್ನು ಆಸ್ಪತ್ರೆಗೆ ಸೇರಿಲಾಗಿದೆ ಎಂಬ ಕರೆ ಬಂದಿತು. ಕೂಡಲೇ ನಾನು ಆಸ್ಪತ್ರೆಯಲ್ಲಿ ಅಮ್ಮನ ಜತೆಯಲ್ಲಿದ್ದ ಅಕ್ಕನಿಗೆ ಕರೆ ಮಾಡಿ ವಿಚಾರಿಸಿದೆ. ವೈದ್ಯರೊಂದಿಗೂ ಮಾತನಾಡಿದೆ. ನಾನು ವೇದಿಕೆಯ ಮೇಲೆ ಶೂಟಿಂಗ್‌ ನಲ್ಲಿ ನಿರತನಾಗಿದ್ದಾಗ ಅಮ್ಮನ ಆರೋಗ್ಯ ಗಂಭೀರವಾಗಿದೆ ಎಂಬ ಸಂದೇಶ ಸೆಟ್‌ ನಲ್ಲಿದ್ದ ನನ್ನ ಸಹದ್ಯೋಗಿಗೆ ಬಂದಿತ್ತು. ನನ್ನ ವೃತ್ತಿ ಜೀವನದಲ್ಲಿ ಅಸಹಾಯಕ ಪರಿಸ್ಥಿತಿಯನ್ನು ಮೊದಲ ಬಾರಿಗೆ ಅನುಭವಿಸಿದ್ದೆ. ಇಲ್ಲಿ ನಾನು ಶನಿವಾರದ ಬಿಗ್‌ ಬಾಸ್‌ ಎಪಿಸೋಡ್‌ ಶೂಟಿಂಗ್‌ ನಲ್ಲಿ ನಿರತನಾಗಿದ್ದರೂ ನನ್ನ ಅಮ್ಮನ ಆರೋಗ್ಯ ಕುರಿತು ಮನಸ್ಸಿನಲ್ಲಿ ಭಯ ಆವರಿಸಿತ್ತು.

ನನ್ನ ಮನಸ್ಸಿನಲ್ಲಿ ಗೊಂದಲ ಉಂಟಾಗಿತ್ತು. ಇಲ್ಲಿ ಕರ್ತವ್ಯವನ್ನು ನಿರ್ವಹಿಸಲೇ ಅಥವಾ ಆಸ್ಪತ್ರೆಗೆ ಹೋಗಿ ಅಮ್ಮನ ಬಳಿ ಇರಲೇ ಎಂಬ ದ್ವಂದ್ವ ಉಂಟಾಗಿತ್ತು. ಆದರೆ ಅಂತಿಮವಾಗಿ ನಾನು ಶೂಟಿಂಗ್‌ ಮುಂದುವರೆಸಲು ನಿರ್ಧರಿಸಿದ್ದೆ. ಏಕೆಂದರೆ ಕರ್ತವ್ಯ ಮೊದಲು ಎಂದು ಹೇಳಿ ಕೊಟ್ಟಿದ್ದೇ ಅಮ್ಮ. ಅಮ್ಮ ಹೇಳಿಕೊಟ್ಡ ಮೌಲ್ಯವನ್ನು ಪಾಲಿಸಿದ್ದೆ. ಶನಿವಾರದ ಬಿಗ್‌ ಬಾಸದ್‌ ಶೂಟಿಂಗ್‌ ಪೂರ್ಣಗೊಳಿಸಿ ಆಸ್ಪತ್ರೆಗೆ ದೌಡಾಯಿಸಿದೆ. ನಾನು ಆಸ್ಪತ್ರೆಗೆ ಆಗಮಿಸುವ ಕೆಲವೇ ಕ್ಷಣಗಳಿಗೂ ಮೊದಲು ಅಮ್ಮನಿಗೆ ವೆಂಟಿಲೇಟರ್‌ ಅಳವಡಿಸಿದ್ದರು. ಪ್ರಜ್ಞಾವಸ್ಥೆಯಲ್ಲಿದ್ದಾಗ ಅಮ್ಮನನ್ನು ನೋಡಲಾಗದ ಚಡಪಡಿಕೆ ಅನುಭವಿಸುತ್ತಿದ್ದೆ. ಜೀವನ್ಮರಣದ ಹೋರಾಟ ನಡೆಸಿದ್ದ ಅಮ್ಮ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದರು….. ಕೆಲವೇ ಗಂಟೆಗಳಲ್ಲಿ ಎಲ್ಲವೂ ಬದಲಾಗಿತ್ತು. ಇಂತಹುದೊಂದು ಘಟನೆಯಿಂದ ಹೊರಬರುವುದು ಹೇಗೆ ಎಂದು ನನಗೆ ಈ ಕ್ಷಣಕ್ಕೂ ಅರಿವಿಲ್ಲ. ವಾಸ್ತವವನ್ನು ಒಪ್ಪಿಕೊಳ್ಳುವುದು ಹೇಗೆ ಎಂದೂ ತಿಳಿದಿಲ್ಲ. ಬಿಗ್‌ ಬಾಸ್‌ ಶೂಟಿಂಗ್‌ ಗೆ ಹೋಗುವುದಕ್ಕೂ ಮುನ್ನ ಬಿಗಿಯಾದ ಅಪ್ಪುಗೆ ನೀಡಿದ್ದ ಅಮ್ಮ ಕೆಲವೇ ಗಂಟೆಗಳಲ್ಲಿ ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದಾದರೂ ಹೇಗೆ?
ಇದು ಕಟು ಸತ್ಯ. ಕಟು ಸತ್ಯವನ್ನು ಅರಗಿಸಿಕೊಳ್ಳಲು ನಮ್ಮ ಮನಸ್ಸು ಮತ್ತು ಹೃದಯಗಳಿಗೆ ಕೆಲ ಸಮಯ ಬೇಕಾದೀತು. ನನ್ನ ಅಮ್ಮ ಮಹಾನ್‌ ಚೇತನ. ಆಕೆಯನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಈ ಭೂಮಿಯಿಂದ ಆಕೆಯನ್ನು ಕರೆದೊಯ್ಯಲು ಪ್ರಕೃತಿ ಮತ್ತು ದೇವರು ನಿನ್ನೆಯನ್ನು(ಭಾನುವಾರ) ಮಂಗಳಕರ ಎಂದು ಭಾವಿಸಿರಬಹುದು.

ನ್ನನ ಅಮ್ಮನಿಗೆ ಅಂತಿಮ ಗೌರವ ಸಲ್ಲಿಸಲು ಆಗಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ನಿಮ್ಮೆಲ್ಲರಿಗೂ ಭಾರಿಯಾಗಿರುತ್ತೇನೆ. ಮೆಸೇಜ್‌ ಮತ್ತು ಟ್ವೀಟ್‌ ಮೂಲಕ ನನ್ನನ್ನು ಸಮಾಧಾನಪಡಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು.‌


ನನ್ನ ಅಮ್ಮ,,,,ನನ್ನ ಜೀವನದ ಅಮೂಲ್ಯವಾದ ಮುತ್ತು ನನ್ನಮ್ಮ ಇನ್ನಿಲ್ಲ. ಶಾಂತ ಸ್ಥಳವನ್ನು ಆಕೆ ತಲುಪಿದ್ದಾರೆ ಎನ್ನುವುದು ನನಗೆ ತಿಳಿದಿದೆ.

ಅಮ್ಮ….
ಐ ಲವ್‌ ಯೂ, ಐ ಮಿಸ್‌ ಯೂ

ದೀಪು
ಬೆಳಗ್ಗೆ 9.40 ಅಕ್ಟೋಬರ್‌ 21,2024

More articles

Latest article